ನಿಡಗುಂದಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿಡಗುಂದಿ "ಮಧು ಬಂಗಾರಪ್ಪ, ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ನಿಡಗುಂದಿ ತಾಲೂಕ ಶಿಕ್ಷಕರ ರಿಂದ ಸನ್ಮಾನದ ಜೊತೆಗೆ ಮನವಿಯನ್ನು ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನಲ್ಲಿ ಜರಗಿತು.
ಪ್ರವಾಸವನ್ನು ಕೈಗೊಂಡ ಮಧು ಬಂಗಾರಪ್ಪ ಸರ್ಕಾರ 2 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಹೊಸಪೇಟೆಯಲ್ಲಿ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮ ಹಾಗೂ ಬೃಹತ್ ಸಮಾವೇಶದ ಪೂರ್ವಭಾವಿ ಸಭೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕ ಎಪಿಎಂಸಿ ಕಲ್ಯಾಣಮಂಟಪದಲ್ಲಿ ಪೂರ್ವಭಾವಿ ಸಭೆ.
ಈ ಕಾರ್ಯಕ್ರಮಕ್ಕೆ ತೆರಳುವಾಗ ನಿಡಗುಂದಿಯ ಮುದ್ದೇಬಿಹಾಳ ಕ್ರಾಸ್ ರಸ್ತೆ ಮಧ್ಯದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಿಕ್ಷಕ ಶಿಕ್ಷಕರು ಸನ್ಮಾನಿಸಿ ಮನವಿ ನೀಡದರು.
ಸಚಿವರಿಗೆ ಶಿಕ್ಷಕಿಯರು ಹಣೆಗೆ ಕುಂಕುಮ ಹಚ್ಚಿ ಆರತಿ ಎತ್ತಿದರು, ನಂತರ ಬಸವಣ್ಣನವರ ಮೂರ್ತಿಯನ್ನು ನೀಡುವವರ ಜೊತೆಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿದ ಮಧು ಬಂಗಾರಪ್ಪ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಹೇಳುವುದರ ಜೊತೆಗೆ ಸನ್ಮಾನಿಸಿದರು.
ಸನ್ಮಾನದಲ್ಲಿ ಭಾಗಿಯಾದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವನಬಾಗೇವಾಡಿ ವಸಂತ ರಾಥೋಡ್, ಎಂ ಎಸ್ ಮುಕಾರ್ತಿಹಾಳ್, ಸಲೀಮ್ ದಡೇದ, ಸುನಿಲ್ ನಾಯಕ್, ಎಸ ಎಚ್ ಬಿರಾದಾರ್, ಎಂ ಎಂ ಮುಲ್ಲಾ, ಎಂ ಆರ್ ಮಕಾನದಾರ ಇನ್ನು ಹಲವಾರು ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು.
ವರದಿ : ಅಲಿ ಮಕಾನದಾರ

