Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಲಕನ ಪ್ರಾಣ ರಕ್ಷಿಸಲು ಹೋದ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದ್ದ ಮಹಾಂತೇಶ್. ಹೂವಪ್ಪ. ಹೊಸಮನಿ ಮಲಪ್ರಭಾ ನದಿಯಲ್ಲಿ ಮುಳುಗಿ ಸಾವು

Advertisement
ನಿನ್ನೆ ಸರಿಸುಮಾರು 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಭಾರತಿಯ ಸೇನೆ 19 ಮದ್ರಾಸ್ ಯುನಿಟ್ ರೆಜಮೆಂಟ್ ಮದ್ರಾಸ್ 7 ನಲ್ಲಿ ಸುಮಾರು 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಗದಗ ಜಿಲ್ಲೆ ರೋಣ ತಾಲ್ಲೂಕು ಬೇನಾಳ ಗ್ರಾಮದ ಯೋಧ ರಜೆಯ ನಿಮಿತ್ಯ ಸ್ವಗ್ರಾಮಕ್ಕೆ ಆಗಮಿಸಿದ್ದು ಯೋಧ ಮಹಾಂತೇಶ್. ಹೂವಪ್ಪ.ಹೊಸಮನಿ ವಯಸ್ಸು 26 .... ಯೋಧ ಮಹಾಂತೇಶನ ಸಹೋದರಿಯ ಮಗ ಶೇಖಪ್ಪ. ಮುತ್ತಪ್ಪ. ಮೂಲಿಮನಿ ವಯಸ್ಸು 15.....
ಈತನು 9 ನೇ ತರಗತಿಯಲ್ಲಿ ಮಂಗಳೂರಿನಲ್ಲಿ ಓದುತ್ತಿದ್ದು ಶಾಲೆಯ ರಜೆಯ ನಿಮಿತ್ಯ ಅಜ್ಜಿಯ ಮನೆಗೆ ಬಂದಿದ್ದು ಸ್ನಾನಕ್ಕೆಂದು ಚೊಳಚಗುಡ್ಡ ಗ್ರಾಮದ ಸಮೀಪದಲ್ಲಿರುವ ಮಲಪ್ರಭಾ ನದಿಗೆ ಜಿಗಿದಿದ್ದು ಮುಳುಗುವ ಹಂತದಲ್ಲಿದ್ದ ಅಳಿಯ ಶೇಖಪ್ಪ ನ ಪ್ರಾಣ ಉಳಿಸಲು ನೀರಿಗೆ ಜಿಗಿದ ಯೋಧ ಮಹಾಂತೇಶ್ ನನ್ನು ಬಿಗಿದಪ್ಪಿದ ಶೇಖಪ್ಪ್ ಬಾಲಕ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಮೃತ ಭಾರತೀಯ ಸೇನೆಯ 19 ಮದ್ರಾಸ್ ಯುನಿಟ್ ರೆಜಮೆಂಟ್ ಮದ್ರಾಸ್ 7 ರಲ್ಲಿ 7 ವರ್ಷಗಳಿಂದಸೇವೆ ಸಲ್ಲಿಸುತ್ತಿದ್ದು ರಜೆಗೆಂದು ಯೋಧ ಮಹಾಂತೇಶ್ ಸ್ವಗ್ರಾಮ ರೋಣ ತಾಲ್ಲೂಕಿನ ಬೇನಾಳ ಗ್ರಾಮಕ್ಕೆ ಆಗಮಿಸಿದ್ದನು ಎನ್ನಲಾಗ್ತಾ ಇದೆ.

ಇನ್ನು ಬಾದಾಮಿ ಅಗ್ನಿ ಶಾಮಕ ಠಾಣೆಯ A.F.S.O...... ಬಿ. ಪಿ. ಮರಡಿ ಹಾಗೂ ಅಗ್ನಿ ಶಾಮಕ ಬಾದಾಮಿ ಠಾಣೆ ಸಿಬ್ಬಂದಿಗಳು ಸೇರಿ ಮಲಪ್ರಭಾ ನದಿಯಲ್ಲಿ ಬೋಟ್ ಮೂಲಕ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದು ಯೋಧ ಮಹಾಂತೇಶ್ ನ ಮೃತ ದೇಹ ಸಿಕ್ಕಿದ್ದು ,, ಯೋಧನ ಸಹೋದರಿಯ ಮಗ ಬಾಲಕ ಶೇಖಪ್ಪ ನ ಮೃತ ದೇಹ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಬಾದಾಮಿ ಪೊಲೀಸ್ ಇಲಾಖೆಯ ಪಿ. ಎಸ್. ಐ. ವಿಠಲ್ ನಾಯಿಕ್ ನೇತೃತ್ವದಲ್ಲಿ ಬಾದಾಮಿ ಪೊಲೀಸರು ಜೊತೆಗೂಡಿ ಮೃತ ದೇಹದ ಪತ್ತೆಗೆ ಮಲಪ್ರಭಾ ನದಿಯಲ್ಲಿ ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ.

ರೋಣ ತಾಲ್ಲೂಕಿನ ಬೇನಾಳ ಗ್ರಾಮಸ್ಥರು ಮಲಪ್ರಭಾ ನದಿ ದಡದಲ್ಲಿ ತಂಡೋಪ ತಂಡವಾಗಿ ಸೇರಿದ್ದು ಮೃತ ಯೋಧನು ಆವರ ತಂದೆ ತಾಯಿಗೆ ಒಬ್ಬನೇ ಮಗ ಹಾಗೂ ಮೂರು ಜನ ಸಹೋದರಿಯರು ಎಂದು ತಿಳಿದುಬಂದಿದೆ. ಮಗನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ವರದಿ:ಎಸ್, ಎಸ್, ಕವಲಾಪುರಿ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ