Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

'ಜೀವನ ಮೌಲ್ಯಗಳನ್ನು ಜಗತ್ತಿಗೆ ಅರುಹಿದ ಮಹರ್ಷಿ ವಾಲ್ಮೀಕಿ'

Advertisement
ಕಾಗವಾಡ:ಮಹರ್ಷಿ ವಾಲ್ಮೀಕಿಯವರು ಪವಿತ್ರ ರಾಮಾಯಣ ರಚನೆ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ್ದಾರೆ ಎಂದು ತಹಸೀಲ್ದಾರ ರವಿಂದ್ರ ಹಾದಿಮನಿ ಹೇಳಿದರು.
ಅವರು ದಿ 7ರಂದು ಮಂಗಳವಾರ ಪಟ್ಟಣದ  ಮಲ್ಲಿಕಾರ್ಜುನ ಪ್ರೌಢಶಾಲೆಯ ಸಭಾವನದಲ್ಲಿ                  ತಾಲೂಕಾಡಳಿತ, ತಾಲೂಕಾ ಪಂಚಾಯತ್, ಪಟ್ಟಣಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ  ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಾಲ್ಮೀಕಿಯವರ ತತ್ವಾದರ್ಶ ಸಾರ್ವಕಾಲಿಕ. ಮಹರ್ಷಿ ವಾಲ್ಮೀಕಿ, ಜಗಜ್ಯೋತಿ ಬಸವಣ್ಣನವರು, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಇನ್ನಿತರ ಮಹಾತ್ಮರು, ದೇಶಭಕ್ತರು, ಸಂತರು, ಶರಣರು, ಒಂದೇ ಜಾತಿ, ಮತಕ್ಕೆ ಸೀಮಿತರಾದ ವ್ಯಕ್ತಿಗಳಲ್ಲ. ಇವರು ನಾಡಿನ ಜನಾಂಗಕ್ಕೆ ನೀಡಿದ ಕೊಡುಗೆ ಅನನ್ಯ. ಇಂತವರ ಜಯಂತಿ, ಕಾರ್ಯಕ್ರಮಗಳನ್ನು ಸರ್ವ ಧರ್ಮದ ಜನರು ಒಟ್ಟಾಗಿ ಅರ್ಥಪೂರ್ಣವಾಗಿ ಆಚರಿಸಬೇಕು. ಇವರ ತತ್ವ ಸಂದೇಶಗಳನ್ನು ಮುಂದಿನ ಜನಾಂಗದವರಿಗೂ ತಿಳಿಯಪಡಿಸುವ ಮೂಲಕ ಮಹಾತ್ಮರ ಹೆಸರು ಅಜರಾಮರವಾಗಿ ಉಳಿಯುಂತಾಗಬೇಕು ಎಂದರು.
ವಾಲ್ಮೀಕಿ ಸಮಾಜ ತಾಲುಕಾ ಅಧ್ಯಕ್ಷ , ರಮೇಶ ನಾಯಕ ,ಮಾತನಾಡಿ ಸಮಾಜ ಭಾಂಧವರು ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಸಮಾಜವು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದ ಅವರು ಹೇಣ್ಣು ಮಕ್ಕಳನ್ನು ಕರುಳ ಬಳ್ಳಿ ಎಂದು ಬೇಗನೆ ವಿವಾಹ ಮಾಡದೇ ಅವರಿಗೆ ಹೇಚ್ಚಿನ ಶಿಕ್ಷಣ ಕಲಿಸಿ ಸರಕಾರಿ ಅಧಿಕಾರಿ ಯಾಗುವಂತೆ ಪ್ರೇರೇಪಣೆ ನೀಡಬೇಕು ಎಂದರು.
ಇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ  ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಉಪತಹಸಿಲ್ದಾರ ರಶ್ಮಿ ಜಕಾತಿ,ತಾಪಂ ಕಾರ್ಯನಿರ್ವಾಹಕ ವಿರಣ್ಣಾ ವಾಲಿ ,ಪಪಂ ಮುಖ್ಯಾಧಿಕಾರಿ ಕೆ ಕೆ ಗಾವಡೆ ಸಿ ಡಿ ಪಿ ಒ ರವಿಂದ್ರ ಗುದಗೇನ್ನವರ, ಸಮಾಜಕಲ್ಯಾಣಧಿಕಾರಿ ಸದಾಶಿವ ಮಾಂಗ, ಪಿ ಎಸ್ ಐ ರಾಘವೇಂದ್ರ ಖೋತ,ರಾಜಶೇಖರ ಹಿರೇಮನಿ, ವಿಜಯ ಮಹಾಂತೇಶ ಸವದಿ ಮಹಾದೇವಿ ಮಾಕನ್ನವರ, ಕೆ ಎಸ್ ಹುಳೋಲ್ಕರ,ವಾಲ್ಮೀಕಿ ಸಮಾಜ ಬಾಂಧವರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸ್ವಾಗತಿಸಿ ಎಚ್.ಪಿ ನಾಯಿಕ ಟಿ.ಬಿ ಟೋಣಗೆ ನಿರೂಪಿಸಿದರು. ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ ಮದಭಾವಿ, ವಂದಿಸಿದರು.

ವರದಿ: ಚಂದ್ರಕಾಂತ ಕಾಂಬಳೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ