ಧಾರವಾಡ : ತಾಲೂಕಿನ ಶಿವಳ್ಳಿ ಗ್ರಾಮದ ಪಕ್ಕದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ನಿರ್ಮಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಸ್ಥಗಿತ ಮಾಡಬೇಕೆಂದು ಆಗ್ರಹಿಸಿ ಹೆಬ್ಬಳ್ಳಿ ಹಾಗೂ ಶಿವಳ್ಳಿ ಗ್ರಾಮಸ್ಥರು ಹೆಬ್ಬಳ್ಳಿ ಅಗಸಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು ನವಲಗುಂದ ಧಾರವಾಡ ಮುಖ್ಯ ರಸ್ತೆಯನ್ನು ಬಂದ ಮಾಡಿ ಪರಿಸರ ವಿರೋಧಿ ಯೋಜನೆ ರದ್ದು ಮಾಡಬೇಕೆಂದು. ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಘನತಾಜ್ಯ ವಿಲೇವಾರಿ ಘಟಕ ವಸತಿ ಪ್ರದೇಶಕ್ಕೆ ಹತ್ತಿರದಲ್ಲಿ ನಿರ್ಮಿಸುತ್ತಿರುವದಿರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದು ಯಾವುದೇ ಕಾರಣಕ್ಕೂ ಇಲ್ಲಿ ನಿರ್ಮಿಸಲು ಕೊಡುವುದಿಲ್ಲ ಎಂದು ಕಾಮಗಾರಿಯನ್ನು ಪಾಲಿಕೆ ತಕ್ಷಣ ನಿಲ್ಲಿಸಬೇಕು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪ್ರತಿಭಟನಕಾರರ ಬೇಡಿಕೆಯಾಗಿದೆ ಪ್ರತಿಭಟನೆಯ ನೇತೃತ್ವವನ್ನು ಪರಮೇಶ್ ಕಾಳೆ ಸೋಮಣ್ಣ ಮುಗದ ಶಿವಾನಂದ ಬೇಳಾರದ ದಾನಪ್ಪ ಮುಗದ ಶಿವಾನಂದ ಲಂಬಿ ಹಣಮಂತ ಬಾರಕೇರ ಶಿವಾನಂದ ಮುದ್ದಿ, ರಮೇಶ್ ಲಂಬಿ ಮಂಜುನಾಥ ಸುಳ್ಳದ ಪ್ರಕಾಶ ಕುಂದಗೋಳ ಮುಕ್ತಂ ಹುಸೇನ್ ತಾರಿಹಾಳ ಫಾರೂಕ ಜಮಾದಾರ ಪ್ರೇಮ ನಾಯ್ಕರ ಶಂಕ್ರವ್ವ ಮಲ್ಲಿಗವಾಡ ಪಾರ್ವತವ್ವ ಹಡಪದ ಮಲ್ಲಿಕಾರ್ಜುನ ಚಿನಗುಡಿ ಅನ್ನಪ್ಪ ಬಸಯ್ಯ ಬಕ್ಕಯ್ಯನವರ ಮಹೇಶ್ ಲಕ್ಕನ್ನವರ ಗುರಪ್ಪ ಮೂರಬ ಬಸವರಾಜ ಧಾರವಾಡ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಗುರುರಾಜ ಹಂಚಾಟೆ


