ಕಾಳಗಿ : ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಹಾಗೂ ಪರೀಕ್ಷೆಯಲ್ಲಿ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಯುವ ಜನ ಒಕ್ಕೂಟ ಕಾಳಗಿ ಘಟಕದ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಮಾನವ ಸರಪಳಿ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಬಳಿಕ ಕಾಳಗಿ ಗ್ರೇಡ್ -2 ತಹಶೀಲ್ದಾರ್ ರಾಜೇಶ್ವರಿ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಅಕ್ರಮಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು ಇದೆ ವೇಳೆ ಅನೇಕ ಮುಖಂಡರು ಪ್ರತಿಭಟನೆ ಉದ್ದೇಶೀಸಿ ಮಾತನಾಡಿದ್ದರು,
ಈ ಸಂದರ್ಭದಲ್ಲಿ :ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಡೋಣ್ಣೂರ,ಶರಣು ಮಜ್ಜಿಗೆ,ಅವಿನಾಶ್ ಕೊಡದೂರ,ಗುರುನಂದೇಶ ಕೋಣಿನ,ಗಂಗಾಧರ ಮಾಡಬೂಳ,ಶಾಂತಕುಮಾರ ಸಾಲಹಳ್ಳಿ,ಗಣಪತಿ ಹಾಳಕಾಯಿ,ಪ್ರಶಾಂತ ರಾಜಾಪೂರ,ಮಡಿವಾಳಪ್ಪ ಗುಂಡಗುರ್ತಿ,ಬಂಡು ಗದ್ದಿ,ನೀಲಕಂಠ ಪಾಟೀಲ,ದಿನೇಶ್ ಮೋಘಾ,ಪ್ರಕಾಶ ಮೇಲಕೇರಿ, ಸದಾಂ ಕಲ್ಲಹಿಪ್ಪರಗಾ,ಅವಿನಾಶ್ ಗುತ್ತೇದಾರ,ಅರ್ಜುನ್ ಚಿಂಚೋಳಿ ಎಚ್ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ಹಣಮಂತ ಕುಡಹಳ್ಳಿ


