Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಪೂರ್ಣ ಹದಗೆಟ್ಟಿರುವ ಮೇದಕ್ ಬಸ್ ನಿಲ್ದಾಣ: ಸಾರ್ವಜನಿಕರಿಗೆ ತೊಂದರೆ.

Advertisement
ಸೇಡಂ: ತಾಲೂಕಿನ ಮೇದಕ ಗ್ರಾಮ ಪಂಚಾಯಿತಿಯು ಗಡಿಭಾಗದಲ್ಲಿರುವುದರಿಂದ ಈ ಗ್ರಾಮ ಪಂಚಾಯಿತಿಗೆ ಯಾವುದೇ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ಮಾಡುವುದಿಲ್ಲ.

ಇಲ್ಲಿನ ಚುನಾಯಿತ ಅಧಿಕಾರಿಗಳು ತಾವು ಆಯಿತು, ತಮ್ಮ ಮನೆಕೆಲಸ ಆಯಿತು ಎಂಬಂತೆ ಇರುತ್ತಾರೆ.ಓದು ಬರಹ ತಿಳಿಯದವರನ್ನು, ಮತ್ತು ಹಿಂದುಳಿದ ವರ್ಗದವರನ್ನು ಗ್ರಾಮ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಿ, ಇಲ್ಲಿರುವ ರೆಡ್ಡಿ ಮತ್ತು ಪಾಟೀಲ್ ಅವರದ್ದೇ ಅಂತಿಮ ನಿರ್ಣಯ ಆಗಿರುತ್ತದೆ.



ಇದೊಂದೇ ಗ್ರಾಮ ಪಂಚಾಯತ್ ಮಾತ್ರವಲ್ಲ, ಗಡಿಭಾಗಕ್ಕೆ ಒಳಪಡುವ, ಚಂದಾಪುರ, ಯಾನಗುಂದಿ, ಕಾನಗಡ್ಡ, ರಿಬ್ಬನ್ ಪಲ್ಲಿ, ಮುಧೋಳ್, ಲಿಂಗಂಪಲ್ಲಿ, ಸೇರಿದಂತೆ ಇನ್ನಿತರ ಗ್ರಾಮ ಪಂಚಾಯತ್ ವ್ಯವಸ್ಥೆ ಕೂಡ ಇದೆ ತರ ಇರುತ್ತದೆ.

ಇಷ್ಟೆಲ್ಲಾ ಯಾಕೆ ನಿಮಗೆ ತಿಳಿಸುತ್ತಿದ್ದೇನೆ ಅಂದರೆ.ಮೆದಕ್ ಗ್ರಾಮದ ಬಸ್ ನಿಲ್ದಾಣದ ಸ್ಥಿತಿ ನೋಡಿದರೆ ನಿಮಗೆ ಅರ್ಥವಾಗುತ್ತೆ.

ಇದರ ಬಗ್ಗೆ ಈ ಹಿಂದೆ ಕೂಡ ನಮ್ಮ ಭಾರತ ವೈಭವ ದಿನಪತ್ರಿಕೆ ವರದಿ ಮಾಡಿತ್ತು.ವರದಿ ಮಾಡಿದ ವರದಿಗಾರರಿಗೆ ಅನೇಕ ರೀತಿಯ ಬೆದರಿಕೆಗಳು ಬಂದವು, ಕೊನೆಗೆ ಸ್ವಲ್ಪ ಸ್ವಚ್ಚತೆ ಮಾಡಿದಂತೆ ಮಾಡಿ ಅದನ್ನು ಹಾಗೆ ಬಿಟ್ಟಿದರೆ.

ಸಂಪೂರ್ಣ ಹದಗೆಟ್ಟಿರುವ ಬಸ್ ನಿಲ್ದಾಣವನ್ನು ಕೂಡಲೇ ಸ್ವಚ್ಚಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಅಂಬೇಡ್ಕರ್ ಯುವ ಸೇನೆ ವಲಯ ಉಪಾಧ್ಯಕ್ಷರಾದ ಕೈಲಾಶ್ ಮೌರ್ಯ ಅವರು ಮನವಿ ಮಾಡಿಕೊಂಡಿದ್ದಾರೆ.ಹಾಗೆ ಗಾಡಿ ಭಾಗದ ಗ್ರಾಮ ಪಂಚಾಯತಿಗಳಿಗೆ ಸ್ವಚ್ಚತೆಯನ್ನು ಕಾಪಾಡಲು ಸ್ಥಳೀಯ ಶಾಸಕರು ಎಚ್ಚರಿಕೆ ನೀಡಬೇಕು.



ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದಿಂದ ಬರುತ್ತಿರುವ ಅನುಧಾನ ದಾರಿ ತಪ್ಪಿ ಕಡೆಯ ನಿರ್ಣಯ ಮಾಡುತ್ತಿರುವ ಮನೆಗಳಿಗೆ ಹೋಗುತ್ತಿದೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತಪಡಿಸಿದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ