ಹುಣ್ಣಿಮೆ ಚಂದ್ರನ ನಡುವೆ ತಾರೆಯಾಗುವಾಸೆ
ಕೃಷ್ಣನ ಕೈಯಲ್ಲಿ ಕೊಳಲಾಗುವಾಸೆ
ಸರಸ್ವತಿ ಕೈಯಲ್ಲಿ ವೀಣೆಯಾಗುವಾಸೆ.....
ಎಲ್ಲರೂ ಮುದ್ದಾಡುವ ಬೊಂಬೆಯಾಗುವಾಸೆ
ಕನ್ನಡಾಂಬೆಯ ಮಡಿಲ ಮಗುವಾಗುವಾಸೆ
ಮುದ್ದು ಮಗುವಿನ ನಗುವಾಗುವಾಸೆ
ಎಲ್ಲರ ಬಾಯಲ್ಲಿ ಸಿಹಿ ಮಾತಾಗುವಾಸೆ...
ದುಃಖದಲ್ಲಿದ್ದವರಿಗೆ ಖುಷಿ ನೀಡುವಾಸೆ
ಕಷ್ಟದಲ್ಲಿದ್ದವರಿಗೆ ಸುಖ ನೀಡುವಾಸೆ
ಕವಿಗಳ ಹಾಡಿನ ಸಾಲಾಗುವಾಸೆ
ಲೇಖಕರ ಕೈಯಲ್ಲಿ ಲೇಖನಿಯಾಗುವಾಸೆ...
ಆಗಸದಲ್ಲಿ ಹಕ್ಕಿಯಂತೆ ಹಾರುವಸೆ
ರೈತನ ಶ್ರಮದ ಫಲವಾಗುವಾಸೆ
ಎಲ್ಲರಲ್ಲಿ ಒಂದಾಗಿ ಬಾಳುವಾಸೆ
ಏಳೇಳು ಜನ್ಮದಲ್ಲೂ ಭಾರತದ ಭೂಮಿಯಲ್ಲೇ ಹುಟ್ಟುವಾಸೆ...
[caption id="attachment_162493" align="alignnone" width="765"]
ವರ್ಷಾ ಕುರಹಟ್ಟಿ-ವಿದ್ಯಾರ್ಥಿನಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾನಗರ, ಹುಬ್ಬಳ್ಳಿ[/caption]
- ವರ್ಷಾ ಕುರಹಟ್ಟಿ
-ವಿದ್ಯಾರ್ಥಿನಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾನಗರ, ಹುಬ್ಬಳ್ಳಿ

