LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರಸ್ತೆ ದುರಸ್ತಿ ಕಾಮಗಾರಿ ಪರಿಶೀಲಿಸಿದ ಶಾಸಕರು, ಪಾಲಿಕೆ ಆಯುಕ್ತರು 

Advertisement

ಬೆಳಗಾವಿ : ಮಹಾನಗರ ಪಾಲಿಕೆಯಿಂದ ಇಲ್ಲಿಯ ಕುವೆಂಪು ನಗರದಲ್ಲಿ ಶನಿವಾರ ನಡೆದ ರಸ್ತೆ ದುರಸ್ತಿ ಕಾಮಗಾರಿಯನ್ನು ಮಾಜಿ ಸಚಿವರು, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು ಪರಿಶೀಲಿಸಿದರು. ಗಣೇಶೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಗುಂಡಿ ಮುಚ್ಚಿ ರಸ್ತೆ ದುರಸ್ತಿಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, ಕುವೆಂಪು ನಗರದ ರಸ್ತೆಗಳನ್ನೂ ಸಹ ದುರಸ್ತಿಗೊಳಿಸುವ ಸಂದರ್ಭದಲ್ಲಿ ಖುದ್ದು ಶಾಸಕರು  ಉಪಸ್ಥಿತರಿದ್ದು ,  ಗುಣಮಟ್ಟದ ಕಾರ್ಯ ಆಗಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಆಯುಕ್ತ ಕಾರ್ತಿಕ್ ಎಂ. ಅವರು, ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಕೈಗೊಳ್ಳಲಾದ ಕಾಮಗಾರಿಗಳು ಹಾಗೂ ಸಿದ್ಧತೆಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಗರ ಸೇವಕರಾದ ವೀಣಾ ವಿಜಾಪೂರ, ಮುಷ್ತಾಕ ಮುಲ್ಲಾ ಹಾಗೂ ಬಡಾವಣೆಯ ನಾಗರಿಕರು, ಪಾಲಿಕೆ ಅಭಿಯಂತರರಾದ ಜಗದೀಶ, ಅಕ್ಷತಾ ಹಾಗೂ ಸುಶಾಂತ ಕಾಂಬಳೆ ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

news_1789450692_0_509.webp

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST