ದಿನಾಂಕ: 01/08/2026 ರಂದು ಶ್ರೀ ಕೆ ಎಮ್ ಬಳೋಲಟ್ಟಿ ಸಿಪಿಸಿ ಬನಂ: 3259 ಖಡಕಲಾಟ ಪೊಲೀಸ್ ಠಾಣೆ ರವರು ನೀಡಿದ ಸ:ತ: ದೂರನ್ನು ಖಡಕಲಾಟ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 89/2026 ಕಲಂ: 303 (2), 317 (2) ಸಹಕಲಂ 3(5) ಐಎನ್ಎಸ್-2023 ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇತ್ತು.
ಅದರಂತೆ ತನಿಖೆಯ ಕಾಲಕ್ಕೆ ಆರೋಪಿರಾದ 11 ಸ್ಥಲ್ ಅನೀಲ ಶಾರಬಿದ್ರೆ ವಯಸ್ಸು: 27 ವರ್ಷ ಜಾತಿ: ಹಿಂದೂ ಕಾಟಖ ಉದ್ಯೋಗ: ಕೂಲಿ ಸಾ: ಖಡಕಲಾಟ ತಾ: ಚಿಕ್ಕೋಡಿ ಹಾಗೂ 21 ರೋಹಿತ ಬಾಬಾಸಾಬ ದಾನವಾಡೆ ವಯಸ್ಸು: 24 ವರ್ಷ ಜಾತಿ: ಹಿಂದೂ ಅಂಗಾಯತ ಉದ್ಯೋಗ: ಕೂಲಿ ಸಾ:ಖಡಕಲಾಟ ತಾ:ಚಿಕ್ಕೋಡಿ ಇವರನ್ನು ಪತ್ತೆ ಹಚ್ಚಿ ದಸ್ತಗೀರ ಮಾಡಿ ಸದರಿ ಆರೋಪಿತರ ತಾಬಾದಲ್ಲಿಂದ ಒಟ್ಟು 05 ಮೋಟರ್ ಸೈಕಲ್ಗಳನ್ನು ( ಅಕಿ: 1,30,000 ) ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ರೀ ಕೆ. ರಾಮರಾಜನ್ (ಐಪಿಎಸ್) ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಆರ್. ಬಿ. ಬಸರಗಿ ಹಾಗೂ ಶ್ರೀ ಗೋಪಾಲಕೃಷ್ಣ ಗೌಡರ, ಡಿ.ಎಸ್.ಪಿ ಚಿಕ್ಕೋಡಿ ರವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಬಿ ಎಸ್ ತಳವಾರ ಸಿ.ಪಿ.ಐ ನಿಪ್ಪಾಣಿ ವೃತ್ತ ರವರ ನೇತೃತ್ವದಲ್ಲಿ ಹಾಗೂ ಪೊಲೀಸ್ ಉಪನೀರಿಕ್ಷಕರಾದ ಶ್ರೀಮತಿ ಕೃಷ್ಣವೇಣಿ ಸಿ ಗುರ್ಲಹೊಸೂರ ಮತ್ತು ಖಡಕಲಾಟ ಪೋಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಜನರಾದ ಎಎಸ್‌ಐ ಶ್ರೀ ಮಂಜುನಾಥ ದಿಂಡಿಗಟ್ಟಿ. ಶ್ರೀ ರವಿ ಕುಂಬಾರ, ಶ್ರೀ ಎಸ್ ಸಿ ಅಂಬರಶೆಟ್ಟಿ. ಶ್ರೀ ಕೆ ಎಮ್ ಬಳೋಲಟ್ಟಿ, ಶ್ರೀ ಆರ್ ಎನ್ ಮುರನಾಳೆ ಸಿಪಿಸಿ ಬನಂ: 3696, ಶ್ರೀ ಯು ಎಸ್ ಭಾಗಿ ಸಿಪಿಸಿ ಬನಂ: 3745, ತನಿಖಾ ಸಹಾಯಕರಾದ ಶ್ರೀ ಎಸ್ ಎಲ್ ಬಾಡಕರ ಎಎಸ್‌ಐ, ಶ್ರೀ ಆರ್. ಎಚ್. ಗಸ್ತಿ ಸಿಪಿಸಿ-3072, ಶ್ರೀ ಎ ಎನ್ ಚೌಗಲಾ ಸಿಪಿಸಿ ಬನಂ: 3987. ಶ್ರೀ ಡಿ ಎಮ್ ಹಿರೇಮಠ ಸಿಪಿಸಿ ಬನಂ: 3596 ಹಾಗೂ ಬೆಳಗಾವಿ ತಾಂತ್ರಿಕ ವಿಭಾಗದ ಶ್ರೀ ವಿನೋದ ಠಕ್ಕನ್ನವರ, ಶ್ರೀ ಸಚೀನ ಪಾಟೀಲ ರವರು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಮಾನ್ಯ ಶ್ರೀ ಕೆ. ರಾಮರಾಜನ್ ಐಪಿಎಸ್ ರವರು ಪ್ರಶಂಶಿಸಿರುತ್ತಾರೆ.
ವರದಿ : ರಾಜು ಮುಂಡೆ


