
ಜಾನುವಾರುಗಳ ಮಾಲಿಕರಿಂದ ಸಂಪೂರ್ಣ ಮಾಹಿತಿ ಪಡೆದ ಮೃಣಾಲ ಹೆಬ್ಬಾಳಕರ್, ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜೊತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ, ನಿಯಮಾನುಸಾರ ಜಾರುವಾರುಗಳ ಮಾಲಿಕರಿಗೆ ನೆರವು ನೀಡುವಂತೆ ಕೋರಿದರು.
ಸ್ಥಳದಿಂದಲೇ ಕ್ಷೇತ್ರದ ಶಾಸಕಿಯೂ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ನೀಡಿದ ಮೃಣಾಲ ಹೆಬ್ಬಾಳಕರ್, ಸಚಿವರು ಸಹ ಸರಕಾರದಿಂದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸುವಂತೆ ಮೃಣಾಲ ಹೆಬ್ಬಾಳಕರ್ ಜನರಲ್ಲಿ ವಿನಂತಿಸಿದರು.
ವರದಿ:ಪ್ರತೀಕ ಚಿಟಗಿ

