Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಗಳ ಸಾವಿನ ದು:ಖವನ್ನು ಮರೆಸಿ ನನ್ನ ಬದುಕಿಸಿದ್ದು ಸಂಗೀತ: ಕೆ.ಎಸ್. ಚಿತ್ರಾ

Advertisement
ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಅವರ ಹಾಡುಗಾರಿಕೆಯನ್ನು ಯಾರು ಕೇಳಿಲ್ಲ ಹೇಳಿ? ಅವರ ಮಂತ್ರ ಮುಗ್ದವಾಗಿಸುವ ಹಾಡುಗಾರಿಕೆಗೆ ಮನಸೋಲದವರಿಲ್ಲ. ತೆಲಗು ತಮಿಳು, ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಹಾಡಿರುವ ಅವರು ಕನ್ನಡಲ್ಲಿಯೂ ಹಾಡಿದ್ದಾರೆ.

ಕನ್ನಡದಲ್ಲಿ ಬೆಳ್ಳಿ ಕಾಲುಂಗುರ (1992) ಚಿತ್ರದ ಕೇಳಿಸದೆ ಕಲ್ಲು ಕಲ್ಲಿನಲಿ, ಅಮೃತವರ್ಷಿಣಿ (1997) ಚಿತ್ರದ ತುಂತುರು ಅಲ್ಲಿ ನೀರ ಹಾಡ, ಗಾಳಿಪಟ (2008) ದ ನದೀಮ್ ದೀಮ್ ಥನಾ ಮುಂತಾದ ಅವರ ಹಿನ್ನೆಲೆ ಸಂಗೀತ ಹಿಟ್ ಆಗಿದ್ದು, ಕನ್ನಡ ಭಾಷಿಕರಿಗೆ ಬಹಳ ಅಚ್ಚುಮೆಚ್ಚು ಮತ್ತು ಚಿರಪರಿಚಿತ. ಅವರು ಕನ್ನಡದವರಲ್ಲ ಎಂದರೆ ಹಲವರಿಗೆ ಅಚ್ಚರಿಯಾಗಬಹುದು.

ಇಂದು ಶನಿವಾರ ಅವರ ಕಚೇರಿ ಬೆಂಗಳೂರಿನಲ್ಲಿದ್ದು, ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ. ಅವರು ಮಾತನಾಡದ ಭಾಷೆಗಳಲ್ಲಿನ ಹಾಡುಗಳ ಭಾವನಾತ್ಮಕ ಸಾರವನ್ನು ಸೆರೆಹಿಡಿದು ಹಾಡುವುದು ಹೇಗೆ ಎಂದು ಕೇಳಿದಾಗ, ಹಾಡಿನ ಸಾಹಿತ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಎನ್ನುತ್ತಾರೆ.

ನಾನು ಸಂಗೀತ ಸಂಯೋಜಕರು/ನಿರ್ದೇಶಕರನ್ನು ಹಾಡಿನ ಪರಿಸ್ಥಿತಿ, ಕೆಲವು ಪದಗಳ ಅರ್ಥವನ್ನು ಕೇಳುತ್ತೇನೆ, ಹಾಡಿನ ಸಂದರ್ಭ, ಪರಿಸ್ಥಿತಿ ಮತ್ತು ಅದನ್ನು ಹೇಗೆ ಚಿತ್ರೀಕರಣ ಮಾಡಲಿದ್ದಾರೆ ಎಂದು ನನಗೆ ಹೇಳುತ್ತಾರೆ. ಇದರಿಂದ ಹಾಡಿನ ಸಾಲುಗಳನ್ನು ಅರ್ಥ ಮಾಡಿಕೊಂಡು ಭಾವನೆ ನೀಡಿ ಸಾಧ್ಯವಾದಷ್ಟು ಹೊಂದಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.

ಪದ್ಮಭೂಷಣ, ಪದ್ಮಶ್ರೀ, ಆರು ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಇನ್ನೂ ಹಲವು ಪ್ರಶಸ್ತಿಗಳನ್ನು ಗಳಿಸಿರುವ ಚಿತ್ರಾ ಸಂಗೀತ ಕಚೇರಿಗಳನ್ನು ನಡೆಸುತ್ತಾರೆ. ಸ್ಪಾಟಿಫೈನಲ್ಲಿ ಮಾಸಿಕ ಸುಮಾರು 1.3 ಕೋಟಿ ಕೇಳುಗರ ಸಂಖ್ಯೆಯನ್ನು ಹೊಂದಿದ್ದಾರೆ.

ಅಂದು ನನ್ನ ಜೀವನದ ಬಹಳ ದುಃಖದ ದಿನ

2011 ರಲ್ಲಿ ನನ್ನ ಜೀವನದ ಅತ್ಯಂತ ವಿನಾಶಕಾರಿ ಘಟನೆ ನಡೆದಾಗ ಸಂಗೀತವೇ ನನ್ನ ದುಃಖವನ್ನು ಮರೆಯಲು ಸಹಾಯ ಮಾಡಿದ್ದು, 2011ರಲ್ಲಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಅವರ 8 ವರ್ಷದ ಮಗಳು ಮೃತಪಟ್ಟಿದ್ದರು. "ನನ್ನ ಮಗಳನ್ನು ಕಳೆದುಕೊಂಡಾಗ, ಜೀವನದಲ್ಲಿ ದೊಡ್ಡ ಹೊಡೆತ ಉಂಟಾಯಿತು. ಅಂತಹ ದುಃಖದ ಗಳಿಗೆಯಿಂದ ನನ್ನನ್ನು ಹೊರತಂದು ಎತ್ತಿದ್ದು ಸಂಗೀತವೇ. ಅದು ನನ್ನ ಪ್ರೇರಕ ಶಕ್ತಿ ಎನ್ನುತ್ತಾರೆ.

ಸಂಗೀತ ಕಚೇರಿ ಕೊಡುವಾಸೆ

ಇಷ್ಟೆಲ್ಲಾ ಸಾಧನೆ ಮಾಡಿದ ನಂತರ, ಶಾಸ್ತ್ರೀಯವಾಗಿ ಸಂಗೀತ ತರಬೇತಿ ಪಡೆದ 61 ವರ್ಷದ ಗಾಯಕಿ ಚಿತ್ರಾ ಇನ್ನೂ ಅನ್ವೇಷಿಸದ ಒಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ: ಕರ್ನಾಟಕ ಸಂಗೀತ ಕಚೇರಿಯನ್ನು ಜನರ ಮುಂದೆ ಪ್ರದರ್ಶಿಸುವುದು. ನಾನು ಕರ್ನಾಟಕ ಸಂಗೀತವನ್ನು ಕಲಿತಿದ್ದೇನೆ, ಆದರೆ ನಾನು ಕಲಿತದ್ದೆಲ್ಲವೂ ಸಂಗೀತ ಕಚೇರಿಯನ್ನು ಮಾಡಲು ಸಾಕಾಗುವುದಿಲ್ಲ ಎಂಬ ಭಾವನೆ ನನಗಿದ್ದ ಕಾರಣ ಕರ್ನಾಟಕ ಸಂಗೀತ ಕಚೇರಿ ನಡೆಸುವ ಧೈರ್ಯ ಇರಲಿಲ್ಲ. ನಾನು ಇನ್ನೂ ಹೆಚ್ಚಿನದನ್ನು ಮಾಡಲು ಬಯಸಿದ್ದೆ, ಆದರೆ ಚಿತ್ರರಂಗದಲ್ಲಿ ಹಾಡುಗಳಲ್ಲಿ ಬ್ಯುಸಿಯಿದ್ದ ಕಾರಣ ಶಾಸ್ತ್ರೀಯ ಸಂಗೀತ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಗುರುವಿನೊಂದಿಗೆ ಕಲಿಯಲು ನನಗೆ ಸಮಯ ಸಿಗಲಿಲ್ಲ. ಅದು ಇನ್ನೂ ಬಾಕಿ ಇದೆ, ಅದನ್ನು ಮಾಡಬೇಕಾಗಿದೆ ಎನ್ನುತ್ತಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ