https://youtube.com/shorts/8TGZ6MvRKlg

ಸಕ್ತ ವರ್ಷ ನವರಾತ್ರಿ ಉತ್ಸವದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮಿಗೆ 11 ವಿವಿಧ ರೂಪಗಳಲ್ಲಿ ಅಲಂಕಾರ ಪೂಜೆ ನಡೆಯಲಿದ್ದು ಉತ್ಸವದ ಮೂರನೇ ದಿನವೂ ಬುಧವಾರ ಕರ್ನಾಟಕ ಮಹಾರಾಷ್ಟ್ರ ಗೋವಾ ರಾಜ್ಯಗಳಿಂದ 40 ಸಾವಿರಕ್ಕೂ ಅಧಿಕ ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ಕಮೀಟಿ ವತಿಯಿಂದ ಮಂದಿರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಕರ್ನಾಟಕ ಮಹಾರಾಷ್ಟ್ರದಿಂದ ಆಗಮಿಸಿದ ಭಕ್ತರು ಮಹಾಲಕ್ಷ್ಮಿ ದೇವಿಗೆ ಕುಂಕುಮಾರ್ಚನೆ, ಶ್ರೀಫಲಾರ್ಪಣೆ ಅಭಿಷೇಕ ಮಾಡಿ ಹರಕೆ ಪೂರೈಸಿದರು.

ಹಾಗಾದರೆ ಬನ್ನಿ ವೀಕ್ಷಕರೇ ಮೂರುವರೆ ಶಕ್ತಿ ಪೀಠಗಳಲ್ಲಿ ಒಂದಾದ ಮಹಾಲಕ್ಷ್ಮಿಯ ನವರಾತ್ರಿ ಉತ್ಸವದ ಮೂರನೇ ದಿನದ ಅಲಂಕಾರ ಪೂಜೆಯನ್ನು ಕಂಡು ಪುನೀತರಾಗೋಣ .
ವರದಿ : ಮಹಾವೀರ ಚಿಂಚಣೆ

