Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉತ್ತರ & ದಕ್ಷಿಣ ಕರ್ನಾಟಕ ಲಿಂಗಾಯತ ಸಂಘಟನೆ ಅಗತ್ಯ : ಎಂ. ಬಿ ಪಾಟೀಲ್ 

Advertisement
ಮೈಸೂರು: ಈಗ ಉತ್ತರ ಮತ್ತು ದಕ್ಷಿಣ ಕರ್ನಾಟಕ- ಎರಡೂ ಪ್ರಾದೇಶಿಕ ಭಾಗಗಳ ಸಮಸ್ತ ಲಿಂಗಾಯತರ ಸಂಬಂಧ ಮತ್ತು ಸಂಪರ್ಕ ಗಾಢವಾಗಬೇಕಾದ ಅಗತ್ಯವಿದೆ. ಇದು ಸಾಧ್ಯವಾದರೆ ಲಿಂಗಾಯತ ಸಮುದಾಯದ ಸಂಘಟನೆ ಮತ್ತಷ್ಟು ವ್ಯವಸ್ಥಿತವಾಗಿ ಆಗಲಿದೆ ಎಂದು ಸಮುದಾಯದ ಹಿರಿಯ ಮುಖಂಡರೂ ಆದ ಭಾರೀ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಮೈಸೂರಿನ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘಸಂಸ್ಥೆಗಳು ಮತ್ತು ಬಸವ ಬಳಗಗಳ ಒಕ್ಕೂಟ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತರ‌ ಮತ್ತು ದಕ್ಷಿಣ ಕರ್ನಾಟಕದ ಲಿಂಗಾಯತರು ಒಟ್ಟಾಗುವುದರ ಜತೆಗೆ, ಎಲ್ಲ ಉಪ ಪಂಗಡಗಳನ್ನೂ ಒಂದು ಮಾಡಿ ಸಮನ್ವಯ ಸಾಧಿಸಬೇಕು. ಅನೇಕ ಉಪ ಪಂಗಡಗಳು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಈ ನ್ಯೂನತೆಯನ್ನು ಸರಿಪಡಿಸುವ ಕೆಲಸ ಮೊದಲು ಆಗಬೇಕಾಗಿದೆ. ರಾಜ್ಯದ ದಕ್ಷಿಣ ಭಾಗದಲ್ಲಿ ಸಿದ್ಧಗಂಗೆ ಮತ್ತು ಸುತ್ತೂರು ಮಠಗಳು ಅಪಾರ ಕೆಲಸ ಮಾಡಿವೆ.

ಈಗ ಸಂಘಟನೆಯ ದೃಷ್ಟಿಯಿಂದ ಉತ್ತರ ಭಾಗದವರು ದಕ್ಷಿಣ ಭಾಗದವರಿಗೆ ಸ್ಪಂದಿಸುವ ಕೆಲಸ ಮಾಡಲಿದ್ದೇವೆ. ಜತೆಗೆ ಸಮುದಾಯದ ನ್ಯಾಯಯುತ ಬೇಡಿಕೆಗಳಿಗೆ ಸರಕಾರದ ಬೆಂಬಲವೂ ಇರಲಿದೆ ಎಂದು ಅವರು ನುಡಿದರು.

ನಾವು ನಮ್ಮ ಧರ್ಮವನ್ನು ಪ್ರೀತಿಸಬೇಕು. ಜೊತೆಗೆ ಉಳಿದ ಧರ್ಮಗಳನ್ನು ಗೌರವಿಸಬೇಕು. ಹಿಂದಿನ ಸಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಮಾಡಿದೆವು. ಈ ಬಾರಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆವು ಎಂದು ಅವರು ಹೇಳಿದರು.

ಲಿಂಗಾಯತ ಸಮುದಾಯವನ್ನು ಒಗ್ಗೂಡಿಸಿದ ಕೀರ್ತಿ ಶಿರಸಂಗಿಯ ಲಿಂಗರಾಜ ದೇಸಾಯಿ ಅವರಿಗೆ ಸಲ್ಲುತ್ತದೆ. ಅವರು ವೀರಶೈವ -ಲಿಂಗಾಯತ ಮಹಾಸಭೆ ಹುಟ್ಟು ಹಾಕಿದರು. ಹರ್ಡೀಕರ್ ಮಂಜಪ್ಪನವರು ಬಸವ ಜಯಂತಿಗೆ ಒಂದು ಅರ್ಥಪೂರ್ಣ ರೂಪ ಕೊಟ್ಟರು.

ಫ.ಗು.ಹಳಕಟ್ಟಿ ಅವರು ಒಟ್ಟು 700ಕ್ಕೂ ಹೆಚ್ಚು ವಚನಕಾರರನ್ನು ಗುರುತಿಸಿದರು. ಸಂಸ್ಕೃತಮಯವಾಗಿದ್ದ ಕನ್ನಡಕ್ಕೆ ಇಲ್ಲಿನ ಸಹಜ ರೂಪ ಕೊಟ್ಟ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ ಎಂದು ಅವರು ವಿವರಿಸಿದರು.

ಬಸವಣ್ಣನವರಿಗೆ ವಿಶ್ವಗುರುವಿನ ಸ್ಥಾನವಿದೆ. ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪ ಕಟ್ಟಿದ ಹಿರಿಮೆ ಅವರದಾಗಿದೆ. ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಅವರ ತತ್ವಾದರ್ಶಗಳನ್ನು ಪಸರಿಸಲು ಸಮುದಾಯದ ಸಂಘಟನೆ ಬೇಕಾಗಿದೆ ಎಂದು ಪಾಟೀಲ ಆಶಿಸಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವರಾದ ಡಾ.ಎಚ್. ಸಿ ಮಹದೇವಪ್ಪ, ವೆಂಕಟೇಶ, ಶಾಸಕರಾದ ಡಾ.ಯತೀಂದ್ರ, ವಿನಯ ಕುಲಕರ್ಣಿ ದೇವನೂರಿನ ಶ್ರೀ ಮಹಾಂತ ಸ್ವಾಮೀಜಿ ಮುಂತಾದವರು ಭಾಗವಹಿಸಿದ್ದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ