
ಶಿಬಿರದ ಮೊದಲ ದಿನ ಶ್ರೀ ಮಠದ ಪೂಜ್ಯ ಗುರುಗಳಾದ ಶ್ರೀ ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಶಿಬಿರವನ್ನು ಉದ್ಘಾಟಿಸಿದರು ಹಾಗೂ ರಾಜಾಜಿನಗರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟಿ.ಎನ್ ರವಿಪ್ರಕಾಶ್, ಕಾರ್ಯದರ್ಶಿ ರಮೇಶ್ ಚಂದ್ರ ಹೊಂಗಲ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಶೈಲಜಾ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ದುರ್ಗಾ ಪ್ರಸಾದ್ ಉಪಸ್ಥಿತರಿದ್ದರು.
ಪ್ರತಿದಿನ ಉಪನ್ಯಾಸ ಕಾರ್ಯಕ್ರಮಗಳು, ಶ್ರಮದಾನ ಚಟುವಟಿಕೆಗಳು, ಧ್ವಜಾರೋಹಣ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು.
ಈ ಶಿಬಿರದಿಂದ ವಿದ್ಯಾರ್ಥಿಗಳು ಶಿಸ್ತು, ಸಮಯ ಪರಿಪಾಲನೆ, ಸೇವಾ ಮನೋಭಾವ, ನಾಯಕತ್ವ ಗುಣಗಳು, ಸಂವಹನ ಕೌಶಲ್ಯ, ಪರಿಸರದ ಬಗ್ಗೆ ಕಾಳಜಿ, ಗ್ರಾಮೀಣ ಪ್ರದೇಶದ ಬಗ್ಗೆ ಅರಿವು ಹಾಗೂ ಕಾಳಜಿ, ರಾಷ್ಟ್ರೀಯ ಭಾವೈಕ್ಯತೆ ವಿಷಯಗಳನ್ನು ಕಲಿತುಕೊಂಡಿರುವುದಾಗಿ ಸಮಾರೋಪ ಕಾರ್ಯಕ್ರಮದಲ್ಲಿ ತಿಳಿಸಿದರು.
ವರದಿ : ಅಯ್ಯಣ್ಣ ಮಾಸ್ಟರ್

