
ಸೋಮವಾರ ಮಧ್ಯಾಹ್ನ ಸೋಲಾರ್ ಪಾರ್ಕ್ ನಿರ್ಮಾಣ ಅಲ್ಲಿರುವ ಬಂಡೆಗಳನ್ನ ಹೊಡೆಯುವ ಉದ್ದೇಶದಿಂದ ಅಲ್ಲಿರುವ ಕಾರ್ಮಿಕರಿಗೂ ತಿಳಿಯದೆ ಮಣ್ಣಿನಲ್ಲಿ ಹೂಣಿದ್ದು. ಅಕ್ಕ ಪಕ್ಕದಲ್ಲಿ ಆಕಸ್ಮಿಕ ಬೆಂಕಿ ಬಿದ್ದ ಕಾರಣ ಸ್ಪೋಟಕಗಳನ್ನ ರಕ್ಷಿಸಲು, ಬೆಂಕಿಯನ್ನು ಹಾರಿಸಲು ಹೋದ ಕೂಲಿ ಕಾರ್ಮಿಕರು ಸ್ಪೋಟಕ ಗಂಡು ಸ್ಥಳದಲ್ಲಿಯೇ ಮೃತಪಟ್ಟ ಹಾಗೂ ಗಂಭೀರ ಗಾಯಗೊಂಡಿರುವ ದುರಂತ ನಡೆದಿದೆ.
ಸ್ಪೋಟಕವನ್ನು ವಶ ಪಡೆದ ಅಧಿಕಾರಿಗಳು: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಮರ್ ರಾಜ್ ಕಂಪನಿಯ ಇಂಚಾರ್ಜ್, ಗುತ್ತಿಗೆದಾರರೊಬ್ಬ ಹಾಗೂ ಇಬ್ಬರು ಬ್ಲಾಸ್ಟರ್ ಕಾರ್ಮಿಕರನ್ನು ಪೊಲೀಸರು ಬಂಧಿಸಿ. ವಿಚಾರಣೆ ನಡೆಸಿದ ವೇಳೆ ಸೋಲಾರ್ ಪಾರ್ಕ್ ಸಬ್ ಸ್ಟೇಷನ್ ಸುತ್ತಮುತ್ತಲು ನೆಲದಲ್ಲಿ ಹೂತಿಟ್ಟಿರುವ 54 ಬಾಂಬ್ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವರದಿ: ಶಿವಾನಂದ ಪಾವಗಡ

