ಬಾಗೇಪಲ್ಲಿ :ಪಟ್ಟಣದ ಅಮನ್ ಕಮಿಟಿ ವತಿಯಿಂದ ಭಾರತ ಚುನಾವಣಾ ಆಯೋಗ ಸೂಚಿಸಿರುವ ವಿಶೇಷ ಮತಪಟ್ಟಿಯ ಪರಿಷ್ಕರಣೆ( ಎಸ್ .ಐ. ಆರ್,) ಪ್ರಕ್ರಿಯೆ ಬಗ್ಗೆ ಜಾಗೃತಿ ಸಮಾವೇಶವನ್ನು ಜಾಮಿಯ ಶಾದಿ ಮಹಲ್ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿಚಾರವಾದಿಗಳಾದ ಶಿವಸುಂದರ್ ರವರು ಮಾತನಾಡಿ, ಈ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ದೇಶದ 150 ಕೋಟಿ ಜನರು ಭಾರತೀಯರೆಂದು ಸಾಬೀತುಪಡಿಸಲೇ ಬೇಕು. ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ ಎನ್ನುವ ಎನ್ನುವರೂ ವಿದೇಶಿಯರು ಎಂದು ಅರ್ಥ. ಅದ್ದರಿಂದ ಇದು ಮತಪಟ್ಟಿ ಪರಿಷ್ಕರಣೆ ಅಲ್ಲ ಪೌರತ್ವ ಪರಿಷ್ಕರಣೆಯಾಗಿದೆ.
ಅದ್ದರಿಂದ ಎಸ್.ಐ.ಆರ್ ನಿಂದ ಬಹಳಷ್ಟು ಜನರ ಮತ ಹಕ್ಕುನ್ನು ಕಸಿಯುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ. ಅದಕ್ಕಾಗಿ ತಾವು ಜಾಗೃತಿ ಯಾಗಲು ಈ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರೈತಸಂಘ ಜಿಲ್ಲಾ ಅಧ್ಯಕ್ಷ ಪಿ.ಮಂಜುನಾಥ ರೆಡ್ಡಿ, ರಹಮತ್ ಪಾಷ್, ಅಮನ್ ಕಮಿಟಿ ಅಧ್ಯಕ್ಷ ಅಕ್ರಂಪಾಷ್, ಮೌಲಾನ ಫಾಹಾದ್ ಸಾಬ್ ,ಸರ್ದಾರ್ ಚಾಂದ್ ಪಾಷ .ಪಿ, ಜೀವಿಕ ನಾರಾಯಣಸ್ವಾಮಿ,ಹೇಮಾಚಂದ್ರ, ಆರೀಫ್, ಕರೀಂಸಾಬ್, ಸರದಾರ್ ಅಹಮದ್, ಹಿದಾಯಿತ್ತುಲ್ಲಾ,ಹೈದರಾಲಿ, ,ಇಲಿಯಾಜ್,ಫಯಾಜ್,ಮುಂತಾದವರು ಹಾಜರಿದ್ದರು.
ವರದಿ: ಬಿ.ಎ.ಬಾಬಾಜಾನ್


