Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅನಾಥ ಗಂಡು ಆಕಳು ಕರುವಿಗೆ ತೊಟ್ಟಿಲು ಶಾಸ್ತ್ರ, ನಾಮಕರಣ !!

Advertisement
ಉಡುಪಿಮಣಿಪಾಲದಲ್ಲಿ ಶಿವರಾತ್ರಿಯಂದು ಅನಾಥವಾಗಿ ಸಿಕ್ಕ ಗಂಡು ಕರುವನ್ನು ರಕ್ಷಿಸಿದ ಇಲ್ಲಿನ ಸಮಾಜ ಸೇವಕರೊಬ್ಬರು ಅದಕ್ಕೆ 'ಟೈಗರ್ ಶಿವ' ಎಂದು ನಾಮಕರಣ ಮಾಡಿದರು. ಕರುವಿನ ಕಿವಿಯಲ್ಲಿ ಮೂರು ಬಾರಿ ಟೈಗರ್ ಶಿವ ಎಂದು ಹೇಳುವ ಮೂಲಕ ಶಾಸ್ತ್ರೋಕ್ತವಾಗಿ ನಾಮಕರಣ ನೆರವೇರಿಸಿದರು.

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮಣಿಪಾಲದ ಶಾಂತಿನಗರದಲ್ಲಿರುವ‌ 'ನಿಮ್ಮ ಮನೆ' ಅಂಗಳದಲ್ಲಿ ಕರುವಿಗೆ ತೊಟ್ಟಿಲು ಶಾಸ್ತ್ರವನ್ನು ಧಾರ್ಮಿಕ ವಿಧಿವಿಧಾನಗಳಂತೆ ಮಾಡಿದರು.

ಇದಕ್ಕೂ ಮುನ್ನ, ಶಾಂತಿನಗರ ಗಣೇಶೋತ್ಸವ ಸಭಾ ಭವನದಿಂದ ತೊಟ್ಟಿಲು‌ ಶಾಸ್ತ್ರ ನಡೆಯುವ ಮಂಟಪದವರೆಗೆ‌ ಹೂವುಗಳಿಂದ ಸಿಂಗರಿಸಿ ಮತ್ತು ಸೀತಾರಾಮ ಮಹಿಳಾ ಭಜನಾ ಮಂಡಳಿ ಉಡುಪಿ ಹಾಗೂ‌ ಮಂಚಿ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯ‌ವರು ಟೈಗರ್ ಶಿವನನ್ನು ಮೆರವಣಿಗೆ ಮೂಲಕ ಕರೆತಂದರು.

ನಂತರ ಗೋಧೂಳಿ ಲಗ್ನದಲ್ಲಿ ಕರುವಿಗೆ ನಾಮಕರಣ ಮಾಡಿ ಆರತಿ ಬೆಳಗಿದರು. ಭಜನೆ ಮತ್ತು ಹೂವನ್ನು ಟೈಗರ್ ಶಿವನ ಮೇಲೆ ಸುರಿಸಿದರು. ತೊಟ್ಟಿಲಿನಲ್ಲಿ ಕರುವನ್ನಿಟ್ಟು, ತೂಗಿ ಸಂಭ್ರಮಿಸಿದರು.

ಶೋಭ ಕುಮಾರ್ ಶೆಟ್ಟಿ ಎಂಬವರು ಸ್ವಾತಂತ್ರ್ಯಾ ಪೂರ್ವ ಕಾಲದ (1945) ಹಿತ್ತಾಳೆಯ ತೊಟ್ಟಿಲನ್ನು ನೀಡಿದರು. ದಾನಿಗಳು ಉಚಿತ‌ ಉಪಹಾರ ಮತ್ತು ಹೂವಿನಲಂಕಾರ ಮಾಡಿಸಿದ್ದರು.

ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಾತನಾಡಿ, "ಟೈಗರ್ ಶಿವನ ತಾಯಿ ಒಂದು ಬೀಡಾಡಿ ದನವಾಗಿತ್ತು. ಇದು ಮಣಿಪಾಲದ ಹೃದಯ ಭಾಗದಲ್ಲಿರುವ ಟೈಗರ್ ಸರ್ಕಲ್​ನಲ್ಲಿ ಶಿವರಾತ್ರಿಯ ದಿನ ಗಂಡು ಕರುವಿಗೆ ಜನ್ಮ ನೀಡಿತ್ತು. ಸ್ಥಳೀಯರೊಬ್ಬರು ನನಗೆ ಕರೆ ಮಾಡಿ ವಿಷಯ ತಿಳಿಸಿದರು. ನಾನು ಮಣಿಪಾಲಕ್ಕೆ ಹೋಗಿ ನೋಡಿದಾಗ ಕರು ಅನಾಥವಾಗಿತ್ತು. ಅಲ್ಲೇ ಇದ್ದರೆ ಕರುವಿಗೆ ಅಪಾಯವಾಗುವ ಸಾಧ್ಯತೆ ಇತ್ತು. ಆದ್ದರಿಂದ ರಕ್ಷಿಸಿ, ಸ್ವಲ್ಪ ದಿನ ಹೊಸಬೆಳಕು ಆಶ್ರಮದಲ್ಲಿ ಪೋಷಣೆ ಮಾಡಿದ್ದೇವೆ. ಟೈಗರ್ ಸರ್ಕಲ್​ನಲ್ಲಿ ಶಿವರಾತ್ರಿಯ ದಿನ ಕರು ಸಿಕ್ಕಿದ್ದರಿಂದ ಟೈಗರ್ ಶಿವ ಎಂದು ನಾಮಕರಣ ಮಾಡಿದ್ದೇವೆ" ಎಂದು ತಿಳಿಸಿದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ