https://youtu.be/WXm_bDiAEUo
ಈ ಒಂದು ಭವ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಹುಬ್ಬಳ್ಳಿಯ ಸುತ್ತಮುತ್ತಲಿನ ಲಕ್ಷಾಂತರ ಜನ ಸೇರಿದ್ದರು ಪಥ ಸಂಚಲನವು ಮೊದಲನೇ ವಿಭಾಗ ನೆಹರು ಮೈದಾನದಿಂದ ಕೃಷ್ಣ ಭವನ , ಸಿದ್ದಪ್ಪ ಕಂಬಳಿ ಮಾರ್ಗವಾಗಿ , ದಾಜಿಬಾನ ಪೇಟೆಯ ತುಳಜಾಭವಾನಿ ದೇವಸ್ಥಾನದ ವೃತ್ತದ ಕಡೆಗೆ ತಿರುಗಿ ದುರ್ಗದ ಬೈಲ ಮಾರ್ಗದಿಂದ ಎರಡನೇ ವಿಭಾಗಕ್ಕೆ ಸಂಗಮವಾಗಿ ಬ್ರಾಡವೆ ಮಾರ್ಗವಾಗಿ ಕೊಪ್ಪಿಕರ್ ರಸ್ತೆಯಿಂದ ಮತ್ತೆ ಸರ್ ಸಿದ್ದಪ್ಪ ಕಂಬಳಿ ವೃತ್ತದಿಂದ ತಿರುಗಿ ನೆಹರು ಮೈದಾನದಲ್ಲಿ ಪಥಸಂಚಲನವನ್ನು ಮುಕ್ತಾಯಗೊಳಿಸಿ ಮುಂದಿನ ಕಾರ್ಯಕ್ರಮದಲ್ಲಿ ತೊಡಗಿದರು.

ಈ ಒಂದು ಸಂದರ್ಭದಲ್ಲಿ ಪಥಸಂಚನದಲ್ಲಿ ತೊಡಗಿದ್ದ ಕರಸೇವಕರಿಗೆ ನೆರೆದಂತ ಜನ ಹೂ ಪುಷ್ಪಾರ್ಚನೆ ಮಾಡುವುದರೊಂದಿಗೆ ತಮ್ಮ ದೇಶಾಭಿಮಾನವನ್ನು ಮೆರೆದರು ಪತ ಸಂಚಲನ ನಡೆಯುತ್ತಿದ್ದ ಪ್ರತಿಯೊಂದು ಕಡೆಯೂ ಒಂದೇ ಮಾತರಂ ಬೋಲೋ ಭಾರತ್ ಮಾತಾ ಕೀ ಜಯ್ . ಜೈ ಶ್ರೀ ರಾಮ್ ಜೈ ಶಿವಾಜಿ ಜೈ ಭವಾನಿ ಘೋಷಣೆಗಳು ಕೇಳುತ್ತಿದ್ದವು ಪಥಸಂಚನದಲ್ಲಿ ಪುಟ್ಟ ಪುಟ್ಟ ಕಂದಮ್ಮಗಳ ಸಹಿತ ಮುಪ್ಪಾಗಿರುವ ಅಜ್ಜಂದಿರು ಸ್ವಯಂ ಸೇವಕರಿಗೆ ಪ್ರೋತ್ಸಾಹಿಸುತ್ತಿದ್ದರು. ಈ ಒಂದು ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು ಎನ್ನುವ ಆಶಾಭಾವನೆ ನೆರೆದಿಟ್ಟು.
ವರದಿ: ಗುರುರಾಜ ಹಂಚಾಟೆ

