LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

'ಆಹಾರ ಸೇವನೆ: ಗರ್ಭಿಣಿ ಮಹಿಳೆಯರು ಜಾಗ್ರತೆ ವಹಿಸಿ'

Advertisement
ನೇಸರಗಿ: ಮಹಿಳೆಯರು ಇಂದಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿ ಕೆಲವಾರು ಪದಾರ್ಥಗಳ ದಿನನಿತ್ಯ ಸೇವನೆಯಿಂದ ಸುಮಾರು 5 ಜನ ಗರ್ಭಿಣಿ ಮಹಿಳೆಯರಲ್ಲಿ ಇಬ್ಬರಿಗೆ ಸಮಸ್ಯೆ ಉಂಟಾಗುತ್ತಿದ್ದು ಆದ್ದರಿಂದ ಗರ್ಭಿಣಿ ಮಹಿಳೆಯರು ಹಾಗೂ ಮದುವೆಯಾದ ಮಹಿಳೆಯರು ಮನೆಯಲ್ಲಿ ತಯಾರಿಸಿ ಶುದ್ಧ ಆಹಾರ ಪದಾರ್ಥಗಳನ್ನು ಸೇವಿಸುವದರಿಂದ ಬಂಜೆತನ ನಿವಾರಣೆಗೆ ಮೊದಲ ಪಾಠ ಎಂದು ಹೋಪ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ ಬೆಳಗಾವಿ ಇದರ ಮುಖ್ಯ ವೈದ್ಯರು ಹಾಗೂ ಸ್ತ್ರಿರೋಗ ತಜ್ಞರಾದ ಡಾ. ವರ್ಷಾ ವಿವೇಕರಾವ ಪಾಟೀಲ ಅವರು ಹೇಳಿದರು.
ಅವರು ರವಿವಾರದಂದು ನೇಸರಗಿ ಗ್ರಾಮದ ವೇದಾಂತ ಕ್ಲಿನಿಕ್ ಡಾ. ಪ್ರಕಾಶ ಹಳ್ಯಾಳ (ಡಾ. ವನ್ನೂರ) ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಉಚಿತ ಬಂಜೆತನ ತಪಾಸಣೆ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿ ಡಾ. ಪ್ರಕಾಶ ಹಳ್ಯಾಳ ಅವರು ಅರೋಗ್ಯ ಸೇವೆಯನ್ನು ಉನ್ನತ ಮಟ್ಟದಲ್ಲಿ ಸಲ್ಲಿಸುತ್ತಿದ್ದು ಅವರು ಈ ಭಾಗದ ಜನರ ಬಂಜೆತನ ನಿವಾರಣೆಗೆ ಶಿಬಿರ ಆಯೋಜನೆ ಮಾಡಿ ಜನಸೇವೆ ಮಾಡುತ್ತಿದ್ದಾರೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ನೇಸರಗಿ - ಮಲ್ಲಾಪೂರ ಕೆ ಎನ್ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಶಿಬಿರಕ್ಕೆ ಬಂದ ವೈದರಾದ ಡಾ. ವರ್ಷಾ ಅವರು ಬೇರೆ ಯಾರು ಅಲ್ಲ ಅವರು ರಾಯಭಾಗ ಹುಲಿ, ಮಾಜಿ ಮಂತ್ರಿ ದಿ. ವಿ ಎಲ್ ಪಾಟೀಲ ಅವರ ಸೊಸೆ ಹಾಗೆ ಮಾಜಿ ಎಮ್ ಎಲ್ ಸಿ ವಿವೇಕರಾವ ಪಾಟೀಲ ಅವರ ಧರ್ಮಪತ್ನಿ ಅಗಿದ್ದು ಅಂತಹ ದೊಡ್ಡ ಮನೆತನದ ಸೊಸೆ ಇಂದು ಇಂತಹ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವದು ಹೆಮ್ಮೆ ಎಂದರು.
ಡಾ ಪ್ರಕಾಶ ಹಳ್ಯಾಳ ಮಾತನಾಡಿ ನಾನು ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವೈದ್ಯಕೀಯ ಸೇವೆಯಲ್ಲಿ ಸದಾ ಕೆಲಸ ಮಾಡುವ ಪ್ರಯುಕ್ತ ಬಿಡುವಿಲ್ಲದ ಪ್ರಯುಕ್ತ ಇಂತಹ ಶಿಬಿರಗಳನ್ನು ಆಯೋಜನೆ ಮಾಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಬಿಡುವು ಮಾಡಿಕೊಂಡು ಎಲ್ಲ ವಿಭಾಗದ ಅರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತೇನೆ ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ವೀರಭದ್ರ ಚೋಭಾರಿ, ಹಿರಿಯರಾದ ಮಲ್ಲಿಕಾರ್ಜುನ ಮದನಬಾವಿ, ಪತ್ರಕರ್ತ ಸಿ ವಾಯ್ ಮೆನಸಿಕಾಯಿ, ಪ್ರಕಾಶ ಮೇಲಿನಮನಿ, ಡಾ. ರಶ್ಮಿ, ಶ್ರೀಮತಿ ನಾಗರತ್ನ ಪ್ರಕಾಶ ಹಳ್ಯಾಳ, ಶಿವಶಕ್ತಿ ಮೆಡಿಕಲ್ ಮಾಲೀಕರಾದ ನಾಗರಾಜ ತುಬಾಕಿ ಸೇರಿದಂತೆ ನೇಸರಗಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಬಂಜೆತನ ಪಲಾನುಭವಿಗಳು, ವೇದಾಂತ ಕ್ಲಿನಿಕ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ನಿರೂಪಣೆ ಹಾಗೂ ನೇಸರಗಿ ಗ್ರಾಮದ ಪರಂಪರೆ, ಆದರ್ಶ, ಡಾ ಹಳ್ಯಾಳ ಅವರ ಸೇವೆಯನ್ನು ಶಿಕ್ಷಕರಾದ ರಾಜಶೇಖರ ಗೆಜ್ಜಿ ಅವರು ಅರ್ಥಗರ್ಭಿತವಾಗಿ ನಡೆಸಿಕೊಟ್ಟರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ