Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಕ್ಫ್ ಅಕ್ರಮ ವಿರೋಧಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ

Advertisement
ಕಾಂಗ್ರೆಸ್ ಸರ್ಕಾರದಿಂದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ; ಆರೋಪ

ಭಾಲ್ಕಿ: ಪಟ್ಟಣದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ, ವಕ್ಫ್ ಅಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಗೆ ಸಲ್ಲಿಸಿದರು.

ನಂತರ ಮಾತನಾಡಿದ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಭಾಲ್ಕಿ ತಾಲ್ಲೂಕಿನಲ್ಲಿ ಸುಮಾರು 800 ವರ್ಷದ ಇತಿಹಾಸ ಉಳ್ಳ ರಾಮೇಶ್ವರ ಟೇಕಣಿ ಜಮೀನನ್ನು ಕೂಡಾ ತನ್ನದೆಂದು ವಕ್ಫ್ ಬೋರ್ಡ್ ನೋಟಿಸ್ ನೀಡಿದೆ ಎಂದು ದೂರಿದರು.



ಭಾಲ್ಕಿ ನಗರದ ರೈತರ ಸುಮಾರು 526 ಎಕರೆ ಜಮೀನು ಹಾಗೂ ತಾಲ್ಲೂಕಿನ
ಧನ್ನೂರ (ಎಚ್), ಲಾಧಾ, ಲಖನಗಾಂವ, ತೆಲಗಾಂವ, ಕೋನಮೇಳಕುಂದಾ, ಕೇಸರಜವಳಗಾ, ನಿಟ್ಟೂರ (ಬಿ), ಮೇಹಕರ, ಗೋಧಿಹಿಪ್ಪರ್ಗಾ, ಗೋರಚಿಂಚೋಳಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 968 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್  ಬೋರ್ಡ್ ಹೆಸರು ನಮೂದಿಸಲಾಗಿದೆ. ಇದರಿಂದ ರೈತರು ಆತಂಕದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

[video width="1280" height="720" mp4="https://bharathvaibhav.com/wp-content/uploads/2024/11/WhatsApp-Video-2024-11-05-at-9.45.55-AM.mp4"][/video]

ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಮುಸ್ಲಿಂ ಓಲೈಕೆ, ಹಿಂದೂ ವಿರೋಧಿ ನಿರ್ಧಾರಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ ಪ್ರಮುಖರಾದ ಶಿವರಾಜ ಗಾಂಧಿಗೆ, ಗೋವಿಂದರಾವ್ ಬಿರಾದಾರ, ಕಿರಣ ಖಂಡ್ರೆ, ಚೆನ್ನಬಸವಣ್ಣ ಬಳತೆ, ಶೀವು ಲೋಖಂಡೆ, ರಾಜಕುಮಾರ ದಾಡಗಿ, ಶಿವಕುಮಾರ ಸಜ್ಜನ್, ಬಿಜೆಪಿ ಮಹಿಳಾ ಕಾರ್ಯದರ್ಶಿ ರೇಷ್ಮಾ ತಮಾಸಂಗೆ, ಲುoಬಿನಿ ಮೇಡಂ,
ಮನ್ಮಥ ಸ್ವಾಮಿ, ಡಾ. ಜಗದೀಶ ಭೂರೆ, ಪಾಂಡುರಂಗ ಕನಸೆ, ಶರದ್ ದುರ್ಗಳೆ, ಕಿಶನರಾವ್ ಪಾಟೀಲ ಇಂಚೂರಕರ್, ಕೆ.ಡಿ.ಗಣೇಶ, ಬಾಬುರಾವ್ ಧೂಪೆ, ವೆಂಕಟರಾವ್, ಡಿಗಂಬರರಾವ್ ಮಾನಕಾರಿ ಸೇರಿದಂತೆ ಇತರ ಮುಖಂಡರು ರೈತರು ಇದ್ದರು.

ವರದಿ:ಸಂತೋಷ ಬಿಜಿ ಪಾಟೀಲ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ