Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಂಚಾಯಿತಿ  ಅಧಿಕಾರಿಗಳ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ

Advertisement

ಬಸವನ ಬಾಗೇವಾಡಿ : ತಾಲೂಕಿನ ಹುಣಶ್ಯಾಳ ಪಿ ಬಿ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ವಿರೋಧಿಸಿ ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಪಂಚಾಯಿತಿಗೆ ಸಂಬಂಧಪಟ್ಟ ಮೂರು ಊರಿನ ಗ್ರಾಮಸ್ಥರಿಂದ ಧರಣಿಯನ್ನು ಹಮ್ಮಿಕೊಂಡಿದ್ದರು. 

ಹುಣಶ್ಯಾಳ ಪಿಬಿ ಗ್ರಾಮ ಪಂಚಾಯಿತಿಯ ಪಿಡಿಓ ಅಧಿಕಾರಿಯು ಪಂಚಾಯಿತಿಗೆ ಬರದೆ ಬೇರೆ ಸ್ಥಳದಿಂದ ಅಧಿಕಾರ ಚಲಾಯಿಸುವುದು, 30/07/2026 ರಂದು ಪಂಚಾಯತಿಗೆ ಬರದೆ ಹಣವನ್ನು ವರ್ಗಾವಣೆ ಮಾಡಿರುವುದು, ಪಂಚಾಯಿತಿಗೆ ಸಂಬಂಧವಿಲ್ಲದ ಬೇರೆ ಸಿಬ್ಬಂದಿಯನ್ನು ಬಳಸಿಕೊಂಡು ಕೆಲಸ ಮಾಡಿರುವುದು, ಇವುಗಳನ್ನೆಲ್ಲ ಕಂಡ ಗ್ರಾಮಸ್ಥರು ಸಹಿಸಿಕೊಳ್ಳಲು ಆಗದೇ ಇರುವ ಕಾರಣದಿಂದ ಈ ಧರಣಿಯನ್ನು ಹಮ್ಮಿಕೊಳ್ಳಲಾಯಿತು. 

ಕೂಡಲೇ ಧರಣಿ ನಡೆದ ಸ್ಥಳಕ್ಕೆ ತಾಲೂಕ ಪಂಚಾಯತಿಯ ಇ ಓ ಅಧಿಕಾರಿಗಳು ಭೇಟಿ ನೀಡಿದರು. 

ತಾಲೂಕು ಪಂಚಾಯತಿಯ ಇ ಓ ಅಧಿಕಾರಿಗಳಿಗೆ ಹುಣಶ್ಯಾಳ ಪಿಬಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಮೂ ರು ಹಳ್ಳಿಗಳ ಗ್ರಾಮಸ್ಥರು ಸೇರಿಕೊಂಡು  ಅರ್ಜಿಯನ್ನು ನೀಡಿದರು. 

ಇಂತಹ ಭ್ರಷ್ಟ ಅಧಿಕಾರಿಗಳು ಅಧಿಕಾರವನ್ನು ಚಲಾಯಿಸುವುದು ಯೋಗ್ಯವಲ್ಲ ಇಂತಹ ಅಧಿಕಾರಿಗಳನ್ನು ಕೂಡಲೇ ಅಧಿಕಾರದಿಂದ ವಜಾ ಗೊಳಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಹುಣಸ್ಯಾಳ್ ಪಿಬಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಅಪ್ಪು ನಾಯಕ್, ಶ್ರೀಮಂತ ಅಳಗುಂಡಗಿ, ಬಸು ಹೆಬ್ಬಾಳ್, ನಿಂಗಣ್ಣ ಮುರ್ಗಾನೂರ, ರಮೇಶ್ ಕೊಲ್ಕಾರ್, ಸೋಮನಗೌಡ ಮ್ಯಾಗೇರಿ, ಮುತ್ತು ರಾಥೋಡ್, ಮಂಜುನಾಥ್ ಮನ್ನ್ಯಾಳ, ಬಸವರಾಜ್ ಈಳಗೇರ, ನಾಗಪ್ಪ ಅಳ್ಗುಂಡಗಿ, ಕುಮಾರಗೌಡ ಪಾಟೀಲ, ಶರಣಗೌಡ ಪಾಟೀಲ, ದೇವರೆಡ್ಡಿ ಗಾಡದಿನ್ನಿ,ಮತ್ತು ಅಹಿಂದ ಯುವ ಮುಖಂಡರಾದ ಮತ್ತು ವಡವಡಗಿ ಜಿಲ್ಲಾ ಪಂಚಾಯತಿಯ ಆಕಾಂಕ್ಷಿಯಾಗಿರುವ ಮುತ್ತುರಾಜ್ ಹಾಲಿಹಾಳ ಮತ್ತು ಮೂರು ಊರಿನ ಗ್ರಾಮಸ್ಥರು ಸಹಿತ ಉಪಸ್ಥಿತರಿದ್ದರು.

ವರದಿ : ಕೃಷ್ಣಾ ರಾಠೋಡ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಂಚಾಯಿತಿ  ಅಧಿಕಾರಿಗಳ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಕನಿಷ್ಠ ಮೂಲ ಸೌಕರ್ಯವಿಲ್ಲದೆ ರೋಗಗ್ರಸ್ಥವಾಗಿದೆಖಡಕಲಾಟ ಪೊಲೀಸರ ಭರ್ಜರಿ ಕಾರ್ಯಾಚರಣೆ: 5 ಕಳುವಾದ ಬೈಕ್‌ಗಳ ಪತ್ತೆ – ಇಬ್ಬರು ಆರೋಪಿಗಳ ಬಂಧನಮಾಯಸಂದ್ರ ಕಸಾಪದಿಂದ ಎಸ್.ಜಾನಕಿಗೆ ಗಾನಾಂಜಲಿ ಅರ್ಪಣೆಗುರು ಪೂರ್ಣಿಮೆಯಿಂದ 4ನೇ ದಿನವೂ ಕೊಲ್ಲಾಪುರದ ಮಹಾಲಕ್ಷ್ಮಿ ದರ್ಶನಕ್ಕೆ ಭಕ್ತರ ದಂಡುಮಹಾದೇವಪ್ಪ ತಾತನ ಭಕ್ತಿ ಸುಧೆ ಹಾಡುಗಳಲೋಕಾರ್ಪಣೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿಸಿದ ಎ.ಎಸ್.ಐ ಶಿವಲಿಂಗಪ್ಪಗೆ ಅಭ್ಯರ್ಥಿಗಳ ಕೃತಜ್ಞತೆಒಎಂಆರ್–ಪ್ರಶ್ನೆ ಪತ್ರಿಕೆ ವಿವಾದ; ಅಭ್ಯರ್ಥಿಗಳ ಆಕ್ರೋಶಕ್ಕೆ ಡಿಸಿ ಸ್ಪಷ್ಟನೆಸಚಿವ ಸಂಪುಟ ಪಟ್ಟಿಗೆ ಡಿ. ಕೆ ಶಿವಕುಮಾರ್ ವೇಟಿಂಗ್ : ಅತ್ತ ಖರ್ಗೆ, ರಾಗಾ ಮಿಟಿಂಗ್ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕ ಮಾಡಿದ ಕೈ ಹೈಕಮಾಂಡ್