ಮಾನ್ವಿ: ತಾಲೂಕಿನ ಕಪಗಲ್ ಗ್ರಾಮದ ಗ್ರಾಮಪಂಚಾಯಿತಿ ಕಾರ್ಯಲಾಯದ ಅವರಣದಲ್ಲಿ ಸೇ.19 ರಂದು ತಾಲೂಕು ಆಡಳಿತದಿಂದ ಕಪಗಲ್ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಶಾಸಕ ಜಿ ಹಂಪಯ್ಯ ನಾಯಕ ಸಾಹುಕಾರ ನೇತೃತ್ವದಲ್ಲಿ ನಡೆಯಲ್ಲಿದು ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವುದು.ರಸ್ತೆ,ಶುದ್ದಕುಡಿಯುವ ನೀರು,ಗ್ರಾಮ ಪಂಚಾಯಿತಿ ಸೇವೆಗಳು,ವಿವಿಧ ಸಾಮಾಜಿಕ ವೇತನಗಳು,ಪಡಿತರ ಚೀಟಿ,ರೈತರ ವಿವಿಧ ಯೋಜನೆಗಳು,ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಸೇವೆಗಳಿಗಾಗಿ ಕಪಗಲ್ ಗ್ರಾಮಸ್ಥರು ಸೂಕ್ತವಾದ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಿ ಸ್ಥಳದಲ್ಲಿ ಪರಿಹಾರವನ್ನು ಪಡೆಯಬಹುದಾಗಿದ್ದೆ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದ ಸದುಪಯೊಗ ಪಡೆದುಕೊಳ್ಳುವಂತೆ ತಹಶೀಲ್ದಾರ್ ಭೀಮರಾವ್ ಬಿ.ರಾಮಸಮುದ್ರ ಪ್ರಕಟಣೆಯಲ್ಲಿ ಕೋರಿದ್ದಾರೆ.
ವರದಿ :ಆಂಜನೇಯ ನಸಲಾಪುರ


