ಹುಬ್ಬಳ್ಳಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ ತಾಲೂಕಾ ರೈತ ಸಂಘದ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಮಿನಿ ವಿಧಾನಸೌಧದೆದುರು ಕೆಲಹೊತ್ತು ಪ್ರತಿಭಟನೆ ನಡೆಸಿದ ರೈತ ಸಂಘದ ಪದಾಧಿಕಾರಿಗಳು ಬಳಿಕ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜನಪರ ಅಭಿವೃದ್ಧಿಯ ಹರಿಕಾರರು, ಸಾಮಾಜಿಕ ಕಾಳಜಿಯಿಂದ ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿರುವ ಜನನಾಯಕ, ಎಲ್ಲ ಸಮುದಾಯಗಳ ಏಳೆಗೆ ನಿರಂತರ ಶ್ರಮಿಸುವ ಶಾಸಕ, ಸತತ ಮೂರು ಬಾರಿ ಹು-ಧಾ ಪೂರ್ವ ಮತಕ್ಷೇತ್ರದಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸೋಲಿಲ್ಲದ ಸರದಾರರೆಂದೇ ಖ್ಯಾತರಾದ ಪ್ರಸಾದ ಅಬ್ಬಯ್ಯರಿಗೆ ಸಚಿವ ಸ್ಥಾನ ನೀಡಿ ರಾಜ್ಯದ ಜನತೆಯ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಸಿದ್ದಪ್ಪ ಮೀಸಿ, ಉಪಾಧ್ಯಕ್ಷ ಫಕೀರಗೌಡ ಪಾಟೀಲ, ಕೋಶಾಧ್ಯಕ್ಷ ಅಡಿವೆಪ್ಪ ನಂದಿಹಳ್ಳಿ, ಗೌರವ ಕಾರ್ಯದರ್ಶಿ ಗುರುಸಿದ್ದಪ್ಪ ಕಟಗಿ, ಪಾಲಿಕೆ ಮಾಜಿ ಸದಸ್ಯ ಮೋಹನ ಅಸುಂಡಿ, ಚನ್ನಬಸಪ್ಪ ಅಸುಂಡಿ, ವೀರಭದ್ರಪ್ಪ ಮೇಟಿ, ಬಸವರಾಜ ಮುತ್ತಣ್ಣವರ, ಲಕ್ಷö್ಮಣ ಕರಗಣ್ಣವರ, ವೀರಣ್ಣ ಸಿಂತ್ರಿ, ಸಿದ್ದಪ್ಪ ಮುತ್ತಣ್ಣವರ, ವೀರೇಂದ್ರ ಮಿಸಿ, ವೀರಪಾಕ್ಷಪ್ಪ ಕುಸುಗಲ್, ಗಂಗಾಧರ ಅಸುಂಡಿ, ನೌಶಾದಲಿ ಮೊರಬ, ಪರುತಪ್ಪ ಬಳಗಣ್ಣವರ, ಕಲ್ಯಾಣಪ್ಪ ಬೆಂತುರ, ಸಿದ್ಲಿಂಗಗೌಡ ಪಾಟೀಲ, ಗಣೇಶ ಯಲಗಚ್ಚಿನ, ಮುಕೇಶ ಯಲಗಚ್ಚಿನ ಪಾಲ್ಗೊಂಡಿದ್ದರು
ವರದಿ :ಸುಧೀರ್ ಕುಲಕರ್ಣಿ

