
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಬಸವರಾಜು ಹೆಗ್ಗನಾಯಕ್, ಡಿ.ಎಂ ಬನ್ನೂರು, ಸಹಾಯಕ ನಿರ್ದೇಶಕ ಬಸವರಾಜು ಕಡೆಮಣಿ, aee ಬಸವರಾಜು ಹಾಲಗಿ ಸೇರಿದಂತೆ ಎಲ್ಲಾ ಪಿ.ಡಿ. ಓ ಗಳು, ಸಿಬ್ಬಂದಿಗಳು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಗೂ ಕುಟುಂಬವರ್ಗದವರು ಉಪ ಸ್ಥಿತರಿದ್ದರು. ಈ ಸಂದರ್ಭದಲ್ಲಿ ತಮ್ಮ ಸೇವಾ ಅವಧಿಯಲ್ಲಿ ಆದ ಘಟನೆಗಳ ಬಗ್ಗೆ ರಮೇಶ್ ಹೆಡಗೆ ಮೆಲುಕು ಹಾಕಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಬಸವರಾಜು ಹೆಗ್ಗನಾಯಕ್ ರವರು ಸ್ಫೂರ್ತಿಯ ಮಾತುಗಳನ್ನು ಆಡಿದರು. ಒಟ್ಟಾರೆ ಇಂಜಿನಿಯರ್ ರಮೇಶ್ ಹೆಡಗೆಯವರು ತಮ್ಮ ಸರ್ಕಾರಿ ಕೆಲಸದಿಂದ ಸಾರ್ಥಕ ಸೇವೆ ಸಲ್ಲಿಸಿ ಅದ್ದೂರಿಯಾಗಿ ಅರ್ಥಪೂರ್ಣವಾಗಿ ನಿವೃತ್ತಿಗೊಂಡರು.
ವರದಿ : ಬಸವರಾಜು.

