Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

19 ರಂದು ಎಬಿವಿಪಿಯಿಂದ ರಥಯಾತ್ರೆ

Advertisement
-----------------------------------------ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಉದ್ಘಾಟನೆ

------------------------------------------------------ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ಮಾಹಿತಿ

ಬೀದರ : ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 200 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಹಾಗೂ ಭಾರತದ ಮೊದಲ ಮಹಿಳಾ ಸ್ವತಂತ್ರ ಹೋರಾಟಗಾರ್ತಿ, ವೀರರಾಣಿ ಅಬ್ಬಕ್ಕ ಅವರ 500 ನೇ ಜಯಂತೋತ್ಸವ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ವತಿಯಿಂದ ರಥಯಾತ್ರೆಯನ್ನ ಸಪ್ಟೆಂಬರ್ 19 ರಿಂದ 25 ರವರೆಗೆ ಹಮ್ಮಿಕೊಳ್ಳಲಾಗಿದ್ದು ಕೇಂದ್ರ ಸಚಿವರಾದ ಕು.ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಲಿದ್ದಾರೆ ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ತಿಳಿಸಿದರು.



ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದ ಇತಿಹಾಸದಲ್ಲಿ 200 ವರ್ಷಗಳ ಹಿಂದೆ ಮಹಿಳೆಯೋರ್ವಳು ದಕ್ಷ ಆಡಳಿತ ನಡೆಸಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಕತ್ತಿ ಹಿಡಿದು ಧೈರ್ಯದಿಂದ ಯುದ್ಧ ಮಾಡಿ ಮೊದಲ ಯುದ್ಧದಲ್ಲಿ ಅವರನ್ನು ಸೋಲಿಸಿ, ಕಿತ್ತೂರಿನ ಸ್ವತಂತ್ರವನ್ನ ರಕ್ಷಿಸಲು ಯತ್ನಿಸಿದ ಧೀಮಂತ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಸಾಹತುಶಾಹಿ ವಿರುದ್ಧ ಹೋರಾಡಿದ ಮೊದಲ ಮಹಿಳಾ ಆಡಳಿತಗಾರ್ತಿಯಾಗಿ ಭಾರತೀಯ ಸ್ವತಂತ್ರ ಚಳುವಳಿಯ ಪ್ರಮುಖ ಸಂಕೇತವಾಗಿ ಅವರಿಂದು ಸ್ಮರಿಸಲ್ಪಡುತ್ತಾರೆ.

16ನೇ ಶತಮಾನದಲ್ಲಿ ಕರಾವಳಿ ಕರ್ನಾಟಕದ ಉಲ್ಲಾಳವನ್ನು ಅಳಿದ ಚೌಟ ರಾಜವಂಶದ ಪ್ರಥಮ ತೌಲವ ರಾಣಿಯಾಗಿದ್ದಳು ರಾಣಿ ಅಬ್ಬಕ್ಕ ತನ್ನ ಹೋರಾಟದ ಮೂಲಕ ಪೋರ್ಚುಗೀಸರ ಪಾಲಿಗೆ ಸಿಂಹ ಸ್ವಪ್ನವಾಗಿದ್ದಳು ಈ ಇಬ್ಬರು ಕನ್ನಡ ನಾಡಿನ ಹೋರಾಟಗಾರರ ಕುರಿತು ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಮತ್ತು ಸಾರ್ವಜನಿಕರಿಗೆ ತಿಳಿಸುವ ದೃಷ್ಟಿಯಿಂದ ಈ ರಥಯಾತ್ರೆಯನ್ನ ಹಮ್ಮಿಕೊಳ್ಳಲಾಗಿದೆ ಎಂದರು.

ಐದು ಸಾವಿರ ಜನ ಪಾಲ್ಗೊಳ್ಳುವ ನೀರಿಕ್ಷೆ : ಸ್ವಾಗತ ಸಮಿತಿ ಅದ್ಯಕ್ಷ ಡಾ.ರಜನೀಶ ವಾಲಿ

ರಥಯಾತ್ರೆಯ ಸ್ವಾಗತ ಸಮಿತಿ ಅದ್ಯಕ್ಷರಾದ ಡಾ.ರಜನೀಶ ವಾಲಿ ಅವರು ಮಾತನಾಡಿ ರಾಜ್ಯಾದ್ಯಂತ ಎರಡು ರಥಯಾತ್ರೆಗಳಿಂದ ಸುಮಾರು 50 ಕ್ಕೂ ಅಧಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.

ರಥಯಾತ್ರೆಯು ಸಪ್ಟಂಬರ್ 19 ರಂದು ಬೆಳಿಗ್ಗೆ ಬೀದರ ನಗರದ ಸಿದ್ದಾರೂಢ ಮಠದ ಆವರಣದಲ್ಲಿ ಬೆಳಿಗ್ಗೆ 9:30 ಕ್ಕೆ ಚಿದಂಬರಾಶ್ರಮದ ಡಾ.ಶಿವಕುಮಾರ ಸ್ವಾಮಿಜಿ ಅವರು ಸಾನಿದ್ಯ ವಹಿಸಲಿದ್ದಾರೆ, ಬಳಿಕ ರಾಣಿ ಕಿತ್ತುರು ಚೆನ್ನಮ್ಮ ವೃತ್ತ (ಮೈಲುರ ಕ್ರಾಸ್)ದ ಬಳಿ 10:30 ಕ್ಕೆ ಸಾರ್ವಜನಿಕ ಸಭೆ ನಡೆಯಲಿದ್ದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶಾಲಿನಿ ವರ್ಮಾ ಅವರು ಮಾತನಾಡಲಿದ್ದಾರೆ, ಸೂಮಾರು ಐದು ಸಾವಿರ ಜನ ಸೇರುವ ನೀರಿಕ್ಷಯಿದ್ದು ಅರ್ಥಪೂರ್ಣ ಕಾರ್ಯಕ್ರಮ ಮಾಡಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿ ಹೋಸಳ್ಳಿ ಮಾತನಾಡಿ ಸಾರ್ವಜನಿಕ ಸಭೆಯ ಬಳಿಕ ರಥವು ಬೀದರ ನಗರದ ಪ್ರಮುಖ ವೃತ್ತಗಳ ಮೂಲಕ ಹಾದು ನೌಬಾದ ಮಾರ್ಗವಾಗಿ ಹುಮನಾಬಾದ ತಲುಪಲಿದ್ದು ಮದ್ಯಾಹ್ನ 1 ಗಂಟೆಗೆ ಅಲ್ಲಿಯು ಕೂಡ ಸಾರ್ವಜನಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ರೇವಣಸಿದ್ದಪ್ಪಾ ಜಲಾದೆ, ಸಂಚಾಲಕ ಗುರುನಾಥ ರಾಜಗೀರಾ, ಸಹ ಸಂಚಾಲಕ ವಿರೇಶ ಸ್ವಾಮಿ, ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಹೇಮಂತ, ಜಿಲ್ಲಾ ಪ್ರಮುಖ ಸಂತೋಷ ಹಂಗರಗಿ,ಜಿಲ್ಲಾ ಸಂಚಾಲಕ ನಾಗರಾಜ, ವಿಧ್ಯಾರ್ಥಿನಿ ಪ್ರಮುಖ ಸ್ನೇಹಾ, ಪ್ರಾರ್ಥನಾ ಉಪಸ್ಥಿತರಿದ್ದರು.

ವರದಿ: ಸಂತೋಷ ಬಿಜಿ ಪಾಟೀಲ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ