Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರೈಸ್ತರ ವಿಶ್ವಗುರು ಪೋಪ್ ಆಗಿ ರಾಬರ್ಟ್ ಪ್ರಿವೋಸ್ಟ್ ಆಯ್ಕೆ

Advertisement

ವ್ಯಾಟಿಕನ್ ಸಿಟಿ : ಕ್ರೈಸ್ತರ ವಿಶ್ವಗುರು ಪೋಪ್ ಆಗಿ ರಾಬರ್ಟ್ ಪ್ರಿವೋಸ್ಟ್ ಆಯ್ಕೆಯಾಗಿದ್ದು, ಪೋಪ್ ಲಿಯೋ XIV ಹೆಸರಿನಿಂದ ಅವರು ಇನ್ನು ಮುಂದೆ ಪೋಪ್‌ ಆಗಿ ಗುರುತಿಸಿಕೊಳ್ಳಲಿದ್ದಾರೆ.


ರೋಮ್ ಧರ್ಮಕ್ಷೇತ್ರದ 267ನೇ ಧರ್ಮಾಧ್ಯಕ್ಷರ ಆಯ್ಕೆಯ ವಿಚಾರವನ್ನು ಗುರುವಾರ ರಾತ್ರಿ ಕಾರ್ಡಿನಲ್ ಪ್ರೋಟೋ-ಡೀಕನ್ ಡೊಮಿನೀಕ್ ಮಾಂಬೆರ್ತಿ ಅವರು ಜನತೆಗೆ ಈ ಸುದ್ದಿಯನ್ನು ಘೋಷಿಸಿದರು.


"ಅನ್ನುನ್ಸಿಯೋ ವೋಬಿಸ್ ಗೌದಿಯುಂ ಮಾನ್ಯುಂ… ಹಬೇಮಸ್ ಪಾಪಮ್" (ನಿಮಗೆಲ್ಲರಿಗೂ ನಾನು ಸಂತೋಷದ ಸುದ್ದಿಯನ್ನು ಪ್ರಕಟಿಸುತ್ತೇನೆ : ನಮ್ಮ ವಿಶ್ವಗುರುವಿನ ಆಯ್ಕೆಯಾಗಿದೆ) ಎಂದು ಮಾಂಬೆರ್ತಿ ಘೋಷಣೆ ಕೂಗಿ ಪೋಪ್‌ ಆಯ್ಕೆಯನ್ನು ಪ್ರಕಟಿಸಿದರು.


ಕ್ಯಾಥೋಲಿಕ್ ಚರ್ಚ್ ನ 2,000 ವರ್ಷಗಳ ಇತಿಹಾಸದಲ್ಲಿ ಮೊದಲ ಅಮೆರಿಕನ್ ಪೋಪ್ ಆಗಿ ರಾಬರ್ಟ್ ಪ್ರೇವೋಸ್ಟ್ ಆಯ್ಕೆಯಾಗಿದ್ದಾರೆ.


ಹೊಸದಾಗಿ ಚುನಾಯಿತರಾದ ಪೋಪ್ ಲಿಯೋ XIV ಗುರುವಾರ ವ್ಯಾಟಿಕನ್‌ನ ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಲ್ಲಿ ಸಾಂಪ್ರದಾಯಿಕ ಧಿರಿಸಿನಲ್ಲಿ ಕಾಣಿಸಿಕೊಂಡು ಜನತೆಗೆ ಕೈಬೀಸಿದರು.


ಈ ವೇಳೆ 'ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಎಲ್ಲರೂ ಪರಸ್ಪರ ಕೈಜೋಡಿಸಬೇಕು' ಎಂದು ಕರೆ ನೀಡಿದರು. 'ಮಾತುಕತೆಗಳ ಮೂಲಕ ಸೇತುವೆ ನಿರ್ಮಿಸಿ ಎಲ್ಲರೂ ಪರಸ್ಪರ ಹತ್ತಿರವಾಗಬೇಕು. ಜಗತ್ತಿನಲ್ಲಿ ಸದಾ ಶಾಂತಿ ನೆಲೆಸಲಿ' ಎಂದು ಹೇಳಿದರು.


69 ವರ್ಷದ ರಾಬರ್ಟ್ ಇನ್ನು ಮುಂದೆ 'ಲಿಯೊ 14' ಎಂಬ ಹೆಸರಿನಿಂದ ಕ್ರೈಸ್ತ ವಿಶ್ವರಗುರುವಾಗಿ ಗುರುತಿಸಿಕೊಳ್ಳಲಿದ್ದಾರೆ. 1955ರ ಸೆಪ್ಟೆಂಬರ್ 14ರಂದು ಷಿಕಾಗೊದಲ್ಲಿ ಜನಿಸಿದ ರಾಬರ್ಟ್ ಫ್ರಾನ್ಸಿಸ್ ಪೆರುವಿನಲ್ಲಿ ಸುಧೀರ್ಘ ವೃತ್ತಿ ಜೀವನವನ್ನು ಕಳೆದಿದ್ದು, ವ್ಯಾಟಿಕನ್‌ನ ಪ್ರಬಲ ಬಿಷಪ್‌ಗಳ ಕಚೇರಿಯನ್ನು ಮುನ್ನಡೆಸುತ್ತಿದ್ದಾರೆ.


ಪ್ರಿವೋಸ್ಟ್ ಲಿಯೋ XIV ಎಂಬ ಹೆಸರಿನ ಮೂಲಕ ಇನ್ನು ಮುಂದೆ ಕ್ರೈಸ್ತರ ಪರಮೋಚ್ಚ ಗುರುವಾಗಿ ಅವರು ಗುರುತಿಸಿಕೊಳ್ಳಲಿದ್ದಾರೆ.


ಪೋಪ್ ಆಯ್ಕೆ ಅಂತಿಮಗೊಳ್ಳುತ್ತಿದ್ದಂತೆಯೇ ಪೋಪ್‌ ಆಯ್ಕೆಯ ಸಂಕೇತವಾಗಿ ಇಲ್ಲಿನ ಸಿಸ್ಟೈನ್ ಚಾಪೆಲ್‌ನ ಚರ್ಚ್ ಚಿಮಣಿಯಿಂದ ಬಿಳಿ ಬಣ್ಣದ ಹೊಗೆ ಹಾರಿಬಿಡಲಾಯ್ತು. ಈ ಸಂದೇಶ ಹೊರಬರುತ್ತಿದ್ದಂತೆಯೇ ಸೇಂಟ್ ಪೀಟರ್ಸ್ ಸೈರ್‌ನಲ್ಲಿ ಸೇರಿದ್ದ ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ