Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಮೆಜಾನ್​ನಲ್ಲಿ ವಾರ್ಷಿಕ 50 ಲಕ್ಷ ರೂ. ಸಂಬಳದ ಉದ್ಯೋಗ ಸಂಪಾದಿಸಿದ 22 ರ ಯುವಕ

Advertisement
ವಿಶಾಖಪಟ್ಟಣಂ (ಆಂಧ್ರಪ್ರದೇಶ) : 'GEN Z' ಪೀಳಿಗೆಯ ಯುವಕರು ಬುದ್ಧಿಮತ್ತೆಯಲ್ಲಿ ಅತಿ ತೀಕ್ಷ್ಣಮತಿಗಳು. ಇದರಿಂದಲೇ ಅವರು ವಿಶ್ವದ ಮಹೋನ್ನತ ಸಂಸ್ಥೆಗಳಲ್ಲಿ ಹುದ್ದೆಗೇರುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ, ಆಂಧ್ರಪ್ರದೇಶದ 22 ವರ್ಷದ ಯುವಕ ಇ-ಕಾಮರ್ಸ್​ ದೈತ್ಯ ಅಮೆಜಾನ್​ನಲ್ಲಿ ವಾರ್ಷಿಕ 50 ಲಕ್ಷ ರೂಪಾಯಿ ಸಂಬಳದ ಉದ್ಯೋಗ ಸಂಪಾದಿಸಿಕೊಂಡಿದ್ದಾನೆ.

ಈ ಸಾಧಕನ ಹೆಸರು ಬಲ್ಸಾ ಹರ್ಷ. ವಿಶಾಖಪಟ್ಟಣದ ನಿವಾಸಿಯಾಗಿರುವ ಈತ ಬಿ.ಟೆಕ್​​ ಪದವೀಧರ. ಕೋಡ್​ಚೆಫ್​ (CodeChef) ನಲ್ಲಿ ಪಳಗಿರುವ ಈತನಿಗೆ ಅಮೆಜಾನ್​ ಸಂಸ್ಥೆಯು ವಾರ್ಷಿಕವಾಗಿ ಅರ್ಧಕೋಟಿ ರೂಪಾಯಿ ಸಂಬಳ ನೀಡಲು ಸಜ್ಜಾಗಿದೆ.

ಸಾಧನೆಯ ಬಗ್ಗೆ ಹರ್ಷನ ಮಾತುಗಳುನಾನು ಪಿಯುಸಿವರೆಗೆ ರಾಜ್ಯ ಪಠ್ಯಕ್ರಮದಲ್ಲಿ ಓದಿದ್ದೆ. ಎಂಜಿನಿಯರಿಂಗ್ ಸೇರಿದಾಗ ನನಗೆ ಕೋಡಿಂಗ್ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. ಆದರೆ, ನಮ್ಮ ಪ್ರಾಂಶುಪಾಲರು ಈ ಬಗ್ಗೆ ತಿಳಿಸುತ್ತಿದ್ದರು. 'ಹ್ಯಾಕರ್‌ಅರ್ಥ್'ನಿಂದ ನಮಗೆ ಕ್ಲಿಷ್ಟಕರ ಸಮಸ್ಯೆಗಳನ್ನು ನೀಡುತ್ತಿದ್ದರು. ಪ್ರತಿ ವಾರ ಅವುಗಳಿಗೆ ಉತ್ತರ ಹುಡುಕುವ ಸವಾಲು ನೀಡುತ್ತಿದ್ದರು. ಗೂಗಲ್​ನಲ್ಲಿ ಕೂಡ ಲಭ್ಯವಿರಲಿಲ್ಲ. ನಾವೇ ಕೋಡ್ ರಚಿಸಬೇಕಿತ್ತು. ಇದೇ ನನಗೆ ದೊಡ್ಡ ಅಡಿಪಾಯ ಹಾಕಿಕೊಟ್ಟಿತು ಎಂದಿದ್ದಾರೆ.

ಕೋವಿಡ್​ ಲಾಕ್‌ಡೌನ್​​ನಲ್ಲಿ ಕೋಡಿಂಗ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಎಂಜಿನಿಯರಿಂಗ್​​ನ ಎರಡನೇ ವರ್ಷದಲ್ಲಿ ಕೋಡ್‌ಚೆಫ್‌ನಲ್ಲಿ ಪ್ರೋಗ್ರಾಮಿಂಗ್​ ಆರಂಭಿಸಿದೆ. ಚೆನ್ನೈ ಮೂಲದ ಕಂಪನಿಯಿಂದ ನನಗೆ ವಾರ್ಷಿಕ 12 ಲಕ್ಷ ರೂಪಾಯಿ ಸಂಬಳದ ಆಫರ್ ಬಂದಿತು. ಅಂತಿಮ ವರ್ಷದಲ್ಲಿ, ಬೆಂಗಳೂರಿನ ಸ್ಟಾರ್ಟ್ಅಪ್ ಆದ ಎಫ್‌ಐ ಮನಿಯಿಂದ ವಾರ್ಷಿಕ ₹20 ಲಕ್ಷ ಪ್ಯಾಕೇಜ್‌ ಆಫರ್​​ ಬಂದಿತು. ನಾನು ಅದರಲ್ಲಿ ಸೇರಿಕೊಂಡು ಆರು ತಿಂಗಳು ಆಂಡ್ರಾಯ್ಡ್ ಅಭಿವೃದ್ಧಿಯಲ್ಲಿ ಇಂಟರ್ನ್‌ಶಿಪ್ ಮುಗಿಸಿ, 10 ತಿಂಗಳು ಪೂರ್ಣ ಸಮಯದ ಕೆಲಸ ಮಾಡಿದೆ ಎಂದು ತಿಳಿಸಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ