Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂಗರೂ ನಾಡಿನ ಈ ಕ್ರಿಕೆಟರ್ 27 ನೇ ವಯಸ್ಸಲ್ಲೇ ವಿದಾಯ !!

Advertisement
13 ಬಾರಿ ತಲೆ ಪೆಟ್ಟು ತಿಂದಿದ್ದ ಯುವ ಆಟಗಾರ

ವಿಲ್ ಪುಕೋವ್​​ಸ್ಕಿ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 36 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 57 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು  2350 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್​ನಿಂದ 1 ದ್ವಿಶತಕ ಹಾಗೂ 7 ಶತಕಗಳು ಮತ್ತು 9 ಅರ್ಧಶತಕಗಳು ಮೂಡಿಬಂದಿವೆ. ಇನ್ನು 2021 ರಲ್ಲಿ ಭಾರತದ ಟೆಸ್ಟ್ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ಪುಕೋವ್​​ಸ್ಕಿ ಮೊದಲ ಪಂದ್ಯದಲ್ಲಿ 72 ರನ್ ಬಾರಿಸಿ ಮಿಂಚಿದ್ದರು. ಆ ಬಳಿಕ ಗಾಯದ ಕಾರಣ ಹೊರಗುಳಿದ ಯಂಗ್ ಬ್ಯಾಟರ್ ಇದೀಗ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸುವ ಸುದ್ದಿಯೊಂದಿಗೆ ಮರಳಿದ್ದಾರೆ.

ಆಸ್ಟ್ರೇಲಿಯಾ ತಂಡದ ವಿಲ್ ಪುಕೋವ್​​ಸ್ಕಿ (Will Pucovski )ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ.  ಅದು ಸಹ ತಮ್ಮ 27ನೇ ವಯಸ್ಸಿನಲ್ಲಿ ಎಂಬುದೇ ಅಚ್ಚರಿ.  2021 ರಲ್ಲಿ ಆಸ್ಟ್ರೇಲಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡಿದ್ದ ಪುಕೋವ್​​ಸ್ಕಿ ಅವರನ್ನು ಮುಂದಿನ ರಿಕಿ ಪಾಂಟಿಂಗ್ ಎಂದು ಬಣ್ಣಿಸಲಾಗಿತ್ತು.

ಅದರಲ್ಲೂ ಹದಿಹರೆಯದ ವಿಲ್ ಪುಕೋವ್​​ಸ್ಕಿ  ಅವರ ಪುಲ್​ ಶಾಟ್ ಎಲ್ಲರ ಗಮನ ಸೆಳೆದಿದ್ದವು. ಆಕ್ರಮಣಕಾರಿ ಬ್ಯಾಟಿಂಗ್​ನೊಂದಿಗೆ ಸಂಚಲನ ಸೃಷ್ಟಿಸಿದ್ದ ಪುಕೋವ್​​ಸ್ಕಿ ಇದೀಗ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ತಲೆಗೆ 13 ಬಾರಿ ಚೆಂಡು ಬಡಿದಿರುವುದು.

ವಿಲ್ ಪುಕೋವ್​​ಸ್ಕಿ ಅವರ ವೃತ್ತಿಜೀವನದಲ್ಲಿ ತಲೆಗೆ ಒಟ್ಟು 13 ಬಾರಿ ಚೆಂಡು ಬಡಿದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸುವ ಮುನ್ನವೇ 9 ಬಾರಿ ಇಂತಹದೊಂದು ಆಘಾತ ಎದುರಿಸಿದ್ದರು. 2024 ರಲ್ಲಿ ದೇಶೀಯ ಪಂದ್ಯದಲ್ಲಿ  ರೈಲಿ ಮೆರೆಡಿತ್ ಎಸೆದ ಚೆಂಡು ಅವರ ತಲೆಗೆ ಬಡಿದಿತ್ತು. ಈ ಪಂದ್ಯದ ನಂತರ, ಕ್ರಿಕೆಟ್ ಆಸ್ಟ್ರೇಲಿಯಾ ವೈದ್ಯಕೀಯ ಸಮಿತಿಯು ಅವರ ಭವಿಷ್ಯವನ್ನು ಕಾಪಾಡಿಕೊಳ್ಳಲು ವೃತ್ತಿಜೀವನಕ್ಕೆ ವಿದಾಯ ಹೇಳಬೇಕೆಂದು ಶಿಫಾರಸು ಮಾಡಿದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ