Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಜಯ ಪಾಟೀಲ ಹೇಳಿಕೆ ಸ್ತ್ರೀ ಕುಲಕ್ಕೇ ಅವಮಾನ - ಮ್ಯಾಗೋಟಿ

Advertisement
ಬೆಳಗಾವಿ: ಮಾಜಿ ಶಾಸಕ ಸಂಜಯ ಪಾಟೀಲ ಬಿಜೆಪಿ ಸಭೆಯಲ್ಲಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬಗ್ಗೆ ತೀರಾ ಕೀಳು ಮಟ್ಟದ ಶಬ್ದಗಳಿಂದ ನಿಂದಿಸಿರುವುದನ್ನು ಬೆಳಗಾವಿ ಜಿಲ್ಲಾ ಕೆಡಿಪಿ ಸದಸ್ಯ ಬಸವರಾಜ ಮ್ಯಾಗೋಟಿ ತೀವ್ರವಾಗಿ ಖಂಡಿಸಿದ್ದಾರೆ.
ಸಂಜಯ ಪಾಟೀಲ ಇಡೀ ಸ್ತ್ರೀ ಕುಲವನ್ನೇ ಅವಹೇಳನ ಮಾಡಿದ್ದಾರೆ, ಅದೂ ಮಾಜಿ ಮುಖ್ಯಮಂತ್ರಿ, ಮಾಜಿ ಮಂತ್ರಿ, ಮಾಜಿ ಶಾಸಕ, ಹಾಲಿ ಸಂಸದೆ ಮತ್ತು ಇನ್ನೂ ಆನೇಕ ಗಣ್ಯರು ಭಾಗವಹಿಸಿದ ಸಭೆಯಲ್ಲಿ ಈ ಉದ್ಧಟತನವನ್ನು ಪ್ರದರ್ಶನ ಮಾಡಿದ್ದಾರೆ. ಆತನ ಈ ಅಸಭ್ಯ ವರ್ತನೆಯಿಂದ ವೇದಿಕೆಯ ಮೇಲೆ ಕುಳಿತ ವ್ಯಕ್ತಿಗಳಿಗೆ ಮುಜುಗರ ಆಗಲಿಲ್ಲವೇ? ಆತನ ಮಾತುಗಳಿಗೆ ಇವರೆಲ್ಲಾ ನಗ್ತಾ ಇರೋದು ಕಂಡು ಬಂತು. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮ್ಯಾಗೋಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ದೇಶದ ಪರಂಪರೆಯ ಪ್ರಕಾರ ಸ್ತ್ರೀ ಕುಲವನ್ನು ಭಾರತ ಮಾತೆಗೆ ಹೋಲಿಸುತ್ತೇವೆ. "ಭಾರತ ಮಾತಾ ಕಿ ಜೈ" ಅನ್ನುವ ಸಂಸ್ಕೃತಿ ನಮ್ಮದು. ತಾಯಿಯಾಗಿ, ಸಹೋದರಿಯಾಗಿ ಇಡೀ ತನ್ನ ಕುಟುಂಬವನ್ನು ಮಡಿಲಲ್ಲಿ ಇಟ್ಟುಕೊಂಡು ಜೋಪಾನ ಮಾಡುತ್ತಿರುವ ಮಹಿಳೆಯನ್ನು ಇವರು ನಿಂದಿಸುತ್ತಿದ್ದಾರೆ. ಜನರು ಈಗಾಗಲೆ ಇವರಿಗೆ ತಕ್ಕ ಪಾಠ ಕಲಿಸಿದರೂ ಕೂಡ ಈತ ತನ್ನ ಚಾಳಿ ಬಿಟ್ಟಿಲ್ಲ. ಬಿಜೆಪಿ ಅಭ್ಯರ್ಥಿಗೆ ಹಾಗೂ ಹಾಲಿ ಸಂಸದರಿಗೆ ನಾಚಿಕೆಯಾಗಬೇಕು. ಇವನಿಂದ ನೀವು ಇದೇ ತರಹ ಭಾಷಣ ಮಾಡಿಸ್ತಾ ಹೋದರೆ ಯಾವ ಮಹಿಳೆಯರ ಮತವೂ ನಿಮಗೆ ಸಿಗುವುದಿಲ್ಲ. ಮಾತನಾಡುವಾಗ ಅದು ಯಾವ ರೀತಿಯಾದ ತಿರುವು ಪಡೆಯುತ್ತದೆ ಎಂಬುದನ್ನು ಅರಿತುಕೊಂಡೆ ಮಾತನಾಡಬೇಕು. ನರವಿಲ್ಲದ ನಾಲಿಗೆ ಎಂದು ಉದ್ದುದ್ದ ಬಿಡಬಾರದು. ಮಾತುಗಳ ಮೇಲೆ ಹಿಡಿತವಿರಲಿ. ಇದು ನಿಮಗೆ ಎಚ್ಚರಿಕೆ ಎನ್ನುವುದನ್ನು ತಿಳಿದಿರಿ ಎಂದು ಮ್ಯಾಗೋಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ ಪ್ರತೀಕ ಚಿಟಗಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ