LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ದೇಶದ ಅಖಂಡತೆಗೆ ಸರ್ದಾರ ಪಟೇಲರ ಕೊಡುಗೆ ಅಪಾರ : ವಡ್ಡನಕೆರೆ 

Advertisement

ಭಾಲ್ಕಿ: ದೇಶದ ಅಖಂಡತೆಗೆ ಸರ್ದಾರ ವಲ್ಲಭಭಾಯಿ ಪಟೇಲರ ಕೊಡುಗೆ ಅಪಾರವಾಗಿದೆ ಎಂದು ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೆರೆ ಹೇಳಿದರು.
ಪಟ್ಟಣದ ಪುರಭವನದಲ್ಲಿ ಗುರುವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗವನ್ನು ಭಾರತದ ಒಕ್ಕೂಟದಲ್ಲಿ ಸೇರಿದ ದಿನವೇ ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಿಸುತ್ತೇವೆ. ೧೯೪೭ರಲ್ಲಿ ಅ.೧೫ ರಂದು ಭಾರತ ದೇಶ ಸ್ವತಂತ್ರವಾದರೂ, ಕಲ್ಯಾಣ ಕರ್ನಾಟಕದ ಭಾಗಗಳು ನಿಜಾಮನ ಆಡಳಿತದಲ್ಲಿದ್ದವು. ರಜಾಕರರ ದುರಾಡಳಿತಿಂದ ಬೇಸತ್ತ ಈ ಭಾಗದ ಜನರಿಗೆ ಮುಕ್ತಿ ನೀಡಿದ ದಿನವೇ ನಾವು ಉತ್ಸವವಾಗಿ ಆಚರಿಸುತ್ತಲಿದ್ದೇವೆ. ದೇಶದ ಅಖಂಡತೆಗೆ ಸರ್ದಾರ ವಲ್ಲಭಭಾಯಿ ಪಟೇಲರ ಕೊಡುಗೆ ಅಪಾರವಾಗಿದೆ. ಭಾರತಕ್ಕೆ ಸ್ವಾತಂತ್ರ ಸಿಕ್ಕ ದಿನಮಾನಗಳಲ್ಲಿ ಅನೇಕರ ರಾಜರು ಸ್ವಾತಂತ್ರ ಭಾರತದಲ್ಲಿ ಸೇರಲು ಇಚ್ಛಿಸಿರಲಿಲ್ಲ. ಅಂತಹ ಸಂದರ್ಭದಲ್ಲಿ ಉಕ್ಕಿನ ಮನುಷ್ಯ ಸರ್ದಾರ ಪಟೇಲರ ಚಾಕ ಚಕ್ಕತೆಯಿಂದ ಈ ಭಾಗ ಭಾರತದೇಶದಲ್ಲಿ ಒಗ್ಗೂಡಿತು ಎಂದು ಹೇಳಿದರು.
ಉಪನ್ಯಾಸಕ ದಯಾಸಾಗರ ಬಿಡವೆ ವಿಶೇಷ ಉಪನ್ಯಾಸ ಮಂಡಿಸಿದರು. ಡಿ.ವಾಯ್.ಎಸ್.ಪಿ ಬಲ್ಲಪ್ಪ ನಂದಗಾವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದರ ಸಿಂಗ್, ಸೂರ್ಯಕಾಂತ ಬಿರಾದಾರ, ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಇಸಿಓ ಮಲ್ಲಿಕಾರ್ಜುನ ಕನ್ನಾಳೆ, ದೈಹಿಕ ಶಿಕ್ಷಣಾಧಿಕಾರಿ ರೋಹಿದಾಸ ರಾಠೋಡ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿದೇರ್ಶಕ ಮಲ್ಲಿನಾಥ ಸಜ್ಜನ, ತೋಟಗಾರಿಕೆ ಅಧಿಕಾರಿ ಮಾರುತಿ, ಕೃಷಿ ಅಧಿಕಾರಿ ಸತೀಶ ಮುದ್ದಾ, ಪ್ರಮುಖರಾದ ಸಂತೋಷ ಬಿಜಿಪಾಟಿಲ, ಸೋಮನಾಥಪ್ಪ ಅಸ್ಟೂರೆ, ಜಯರಾಜ ದಾಬಶೆಟ್ಟಿ, ಸಿಆರ್‌ಪಿ ಪ್ರಭು ಡಿಗ್ಗೆ, ಐಟಿಐ ಪ್ರಾಂಶುಪಾಲ ಲಕ್ಶ್ಮೀಕಾಂತ ಪವಾರೆ ಉಪಸ್ಥಿತರಿದ್ದರು. ದೀಪಕ ಥಮಕೆ ನಿರೂಪಿಸಿದರು.

ವರದಿ : ಸಂತೋಷ ಬಿಜಿ ಪಾಟೀಲ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
LLC ಕಾಲುವೆಯ ಕೊಟೇಹಾಳ ಡಿಪ್‌ನಲ್ಲಿ ನೀರಿನ ಅಭಾವ: ಕೆ.ಸೂಗೂರು, ರಾರಾವಿ, ಬಂಡ್ರಾಳು ಗ್ರಾಮಸ್ಥರ ಆಕ್ರೋಶ ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್