ಹಾವೇರಿ : ಜಿಲ್ಲೆ ಸವಣೂರ ಯಶಸ್ವಿ ಮೂರನೇಯ ವರ್ಷದ ಗುಗ್ಗಳ ಸಮೇತ ಪಾದಯಾತ್ರೆಗೆ ಸಹಕರಿಸಿ, ಮಾರ್ಗದರ್ಶನಗೈದ ಹಾಗೂ ಸದಾ ಒಟ್ಟಿಗೆ ಇದ್ದು ಪ್ರೋತ್ಸಾಹಿಸಿದ ಸರ್ವ ಗುರು-ಹಿರಿಯರಿಗೂ ಹಾಗೂ ತಾಯಿಂದರಿಗೂ ಹೃದಯ ಪೂರ್ವಕ ಕೃತಜ್ಞತೆಗಳು. ಪಾದಯಾತ್ರೆಯಲ್ಲಿ ಪಾಲ್ಗೊಂಡು ಭಕ್ತಿಗೆ ಶಕ್ತಿ ಪಡೆದ ಸಹಸ್ರ ನಿಸ್ವಾರ್ಥ ಭಕ್ತವೃಂದದವರಿಗೆ ಶ್ರೀವೀರಭದ್ರೇಶ್ವರ ಬೇಡಿದ ವರ ಕರುಣಿಸಲಿ. ಭಾವನಾತ್ಮಕವಾಗಿ ಇಂದು ನಾ ಬಹಳಷ್ಟು ಪುಳಕಿತನಾಗಿದ್ದೇನೆ. ಏನ್ ಭಕ್ತರ ಸಾಗರ ಹರಿದು ಬಂತು ಧಾರ್ಮಿಕ ಕಾರ್ಯ ಆಯೋಜನೆಗೆ ನೀವುಗಳು ಶಕ್ತಿಯಾಗಿದ್ದಕ್ಕೆ ಮತ್ತೊಮ್ಮೆ ಅಬ್ಬಾ ಏನ್ ಹೇಳೋದು ಪುರುವಂತರ ಕುರಿತು ಹಿರಿಯ ಪುರವಂತರಾದ ರುದ್ರೇಶ ಮತ್ತಿಗಟ್ಟಿ ಹಾಗೂ ನಾಗಪ್ಪ ಕುಂಬಾರ ಅವರ ತಂಡದ ಬಗ್ಗೆ?? ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮೀಜಿಗಳೇ ಸ್ವತ: ಅಚ್ಚರಿ ವ್ಯಕ್ತ ಪಡೆಸಿರುವದು ಪುರವಂತರ ತಂಡದ ಸಾಹಸಕ್ಕೆ ಹಿಡಿದ ಗೈಗನ್ನಡಿಯಾಗಿದೆ. ಪ್ರತಿ ವರ್ಷ ಕಾರಡಗಿ ಶ್ರೀ ವೀರಭದ್ರೇಶ್ವರ ದೇವರ ರಥೋತ್ಸವಕ್ಕೆ ತಮ್ಮೇಲ್ಲರ ಪರವಾಗಿ ಪುರವಂತರ ತಂಡಕ್ಕೆ ಬಿನ್ನಹ ಸ್ಮರಣೆ ಅವಶ್ಯ.
ವರದಿ: ವಿಶ್ವನಾಥ ಹತ್ತಲಗೇರಿ
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.