Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೇಯಸ್ ಅಬ್ಬರ: ಪಂಜಾಬ್ ಹುಲಿಗಳಿಗೆ ಗೆಲುವಿನ ಸಂಭ್ರಮ

Advertisement
ಅಹ್ಮದಾಬಾದ್: ನಾಯಕ ಶ್ರೇಯಸ್ ಅಯ್ಯರ  ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಪಂದ್ಯಾವಳಿಯ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಗುಜರಾತ ಟೈಟನ್ಸ್ ವಿರುದ್ಧ 11 ರನ್ ಗಳ ರೋಚಕ ಜಯ ಪಡೆದು ಶುಭಾರಂಭ ಮಾಡಿತು.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ಗೆ 243  ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಪಡೆದಿದ್ದ ಗುಜರಾತ್ ಟೈಟನ್ಸ್ 5 ವಿಕೆಟ್ ಗೆ 232 ರನ್ ಗಳಿಸಿ   ವೀರೋಚಿತ ಸೋಲು ಅನುಭವಿಸಿತು.

ಪಂಜಾಬ್ ಕಿಂಗ್ಸ್ ಪರ ನಾಯಕ ಶ್ರೇಯಸ್ ಅಯ್ಯ ಸೇರಿದಂತೆ ಎಲ್ಲ ಆಟಗಾರರು ಬಿರುಸಿನ ಆಟಕ್ಕೆ ಇಳಿದಿದ್ದು ಅವರ ಗೆಲುವಿಗೆ ಕಾರಣವಾಯಿತು. ಇತ್ತ ಗುಜರಾತ್ ಟೈಟನ್ಸ್  ನಾನೇನೂ ಕಮ್ಮಿ ಎನ್ನುವಂತೆ ಹೋರಾಟ ನೀಡಿತು. ಪಂಜಾಬ್ ಕಿಂಗ್ಸ್ ಪರ  ಚೊಚ್ಚಲ ಪಂದ್ಯದಲ್ಲಿ ಆಡುತ್ತಿದ್ದ ಪ್ರಿಯಾನ್ಸ್ ಆರ್ಯ ಶ್ರೇಯಸ್ ಅಯ್ಯರ ಹಾಗೂ ಶಶಾಂಕ ಸಿಂಗ್ ಗುಜರಾತ್ ಟೈಟನ್ಸ್ ಬೌಲರುಗಳನ್ನು ಮನ ಬಂದಂತೆ ದಂಡಿಸಿದರು.

ಸ್ಕೋರ್  ವಿವರ:

 ಪಂಜಾಬ್ ಕಿಂಗ್ಸ್ 20 ಓವರುಗಳಲ್ಲಿ 5 ವಿಕೆಟ್ ಗೆ 243

 ( ಶ್ರೇಯಸ್ ಅಯ್ಯರ 97, 42 ಎಸೆತ, 5 ಬೌಂಡರಿ, 9 ಸಿಕ್ಸರ್,  ಪ್ರಿಯಾನ್ಸ್ ಆರ್ಯ 47, 23  ಎಸೆತ, 7 ಬೌಂಡರಿ, 2 ಸಿಕ್ಸರ್ ) ಶಶಾಂಕ ಸಿಂಗ್ 44 ( 16 ಎಸೆತ, 6 ಬೌಂಡರಿ, 2 ಸಿಕ್ಸರ್)

ಗುಜರಾತ್ ಟೈಟನ್ಸ್ 20 ಓವರುಗಳಲ್ಲಿ 5 ವಿಕೆಟ್ ಗೆ 232

ಸಾಯಿ ಸುದರ್ಶನ್ 74, 41 ಎಸೆತ, 5 ಬೌಂಡರಿ, 6 ಸಿಕ್ಸರ್, ಶುಭಮನ್ ಗಿಲ್ 33, 14 ಎಸೆತ, 2 ಬೌಂಡರಿ, 3 ಸಿಕ್ಸರ್, ಜೋಷ್ ಬಟ್ಲರ್ 54, 33  ಎಸೆತ, 4 ಬೌಂಡರಿ, 2 ಸಿಕ್ಸರ್, ಎಸ್. ರೋದರ್ ಪೋರ್ಡ್ 46, 28 ಎಸೆತ, 4 ಬೌಂಡರಿ, 3 ಸಿಕ್ಸರ್. ಪಂದ್ಯ ಶ್ರೇಷ್ಠ ಶ್ರೇಯಸ್ ಅಯ್ಯರ ( ಪಂಜಾಬ್ ಕಿಂಗ್ಸ್)
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ