ಭಾರತ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಲು ಮುಂಬರುವ ಶ್ರೀಲಂಕಾ ವಿರುದ್ಧದ ೨ ಟೆಸ್ಟ್ಗಳ ಸರಣಿಯಲ್ಲಿ ಗೆಲುವು ಮುಖ್ಯವಾಗಿದೆ ಎಂದು ಮಾಜಿ ಕ್ರಿಕೆಟಿಗ ಆಕಾಶ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಆಗಷ್ಟ್ ೧೫ ರಿಂದ ಶ್ರೀಲಂಕಾದ ಗಾಲೆಯಲ್ಲಿ ಎರಡು ಟೆಸ್ಟ್ಗಳ ಸರಣಿ ಆರಂಭವಾಗಲಿದ್ದು, ಸದ್ಯ ಭಾರತ ೪ ಟೆಸ್ಟ್ಗಳಲ್ಲಿ ಗೆಲುವು ೪ ಟೆಸ್ಟ್ಗಳಲ್ಲಿ ಸೋಲು ಅನುಭವಿಸಿ ೫ ನೇ ಸ್ಥಾನದಲ್ಲಿದೆ. ಲಂಕಾ ವಿರುದ್ಧದ ೨ ಟೆಸ್ಟ್ಗಳ ಸರಣಿಯನ್ನು ಗೆಲ್ಲಬೇಕಾಗಿದೆ.
ಭಾರತ ತಂಡವು ೪೮.೫ ಪಾಯಿಂಟ್ ಪ್ರತಿಶತ ಹೊಂದಿದ್ದು, ಟೆಸ್ಟ್ ಚಾಂಪಿಯನಶಿಪ್ ಫೈನಲ್‌ಗೆ ಏರಲು ಲಂಕಾ ವಿರುದ್ಧದ ಈ ಎರಡು ಟೆಸ್ಟ್ಗಳ ಸರಣಿ ಅತ್ಯಂತ ಮಹತ್ವದ್ದಾಗಿದೆ ಎಂದು ಭಾರತ ತಂಡದ ಮಾಜಿ ಆರಂಭ ಬ್ಯಾಟ್ಸಮನ್ ಹೇಳಿದ್ದಾರೆ.


