ಗ್ರಾಮದ ಶ್ರೀ ರಾಕ್ಷಮ್ಮಾ ದೇವಿ ಕಳಸರೋಹಣ ಜಾತ್ರಾ ಮಹೋತ್ಸವಕ್ಕೆ ಯುವ ನಾಯಕರಾದ ಪವನ್ ಕತ್ತಿ ಅವರು ಭಾಗವಹಿಸಿದರು ರಕ್ಷಿ ಗ್ರಾಮದ ಮುಖಂಡರು ಹಿರಿಯರು ಕಿರಿಯರು ಒಟ್ಟು ಗೂಡಿ ಜಾತ್ರೆಯನ್ನು ಅತೀ ವಿಜೃಂಭಣೆಯಿಂದ ನಡೆಸಲಾಯಿತು.

ಜಾತ್ರಾ ಮಹೋತ್ಸವದಲ್ಲಿ ಉಡಿ ತುಂಬುವ, ಕುಂಭೋತ್ಸವ ಪಲ್ಲಕ್ಕಿ ಉತ್ಸವ ಡೊಳ್ಳಿನ ಪದಗಳು ಓಟ ಸ್ಪರ್ಧೆ ಟಗರಿನ ಕಾಳಗ ಕುದುರೆ ಗಾಡಿ ಸವಾರಿ ರಂಗೋಲಿ ಸ್ಪರ್ಧೆ ಮೋಟಾರ್ ಸೈಕಲ್ ಸ್ಪರ್ಧೆ ಹಾಗೂ ಇದೇ ರೀತಿ ಹಲವು ಕಾರ್ಯಕ್ರಮಗಳು ನಡೆಸಲಾಯಿತು. ರಕ್ಷಿ ಗ್ರಾಮದ ಮುಖಂಡರು ಯುವಕರು ಗ್ರಾಮ ದೇವತೆಯ ಸಮಿತಿವತಿಯಿಂದ ಅತೀ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವನ್ನು ಆಚರಿಸಲಾಯಿತು
ಈ ಸಂದರ್ಭದಲ್ಲಿ ಮಹೇಶ್ ಬಡಗಾಂವಿ, ಬಾಳಪ್ಪ ಭೀಮಣ್ಣವರ, ಶಂಕರ್ ಪಾಟೀಲ್, ವಿಠ್ಠಲ್ ಪಾಟೀಲ್, ಅಮರ್ ರಾಮಣ್ಣಕಟ್ಟಿ, ಗಣಪತಿ ಗುಡಾಜ್, ರಾಮಪ್ಪ ಚಂದರಗಿ, ಶಟೆಪ್ಪಾ ಗಸ್ತಿ, ಶಿವಾನಂದ ಪಾಟೀಲ್ ಹಾಗೂ ರಕ್ಷಿ ಗ್ರಾಮದ ಎಲ್ಲ ಯುವಕರು ಉಪಸ್ಥಿತರಿದ್ದರು.
ವರದಿ: ಶಿವಾಜಿ ಎನ್ ಬಾಲೇಶಗೋಳ

