ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಗ್ರಾಮದ ಸೌರಭ ಕಾನ್ವೆಂಟಿನಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷೆ ಕಲ್ಪನಾಮುನಿರಾಜು ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಜನ್ಮಾಷ್ಟಮಿ ಹಬ್ಬದ ಕುರಿತು ಮಾತನಾಡಿದ ಜಿಪಂ ಮಾಜಿ ಸದಸ್ಯೆ ಲೀಲಾವತಿ ಗಿಡ್ಡಯ್ಯ, ಶ್ರೀಕೃಷ್ಣನ ಗೀತೆಗಳನ್ನು ಹಾಡಿ, ಭಜನೆಯನ್ನು ಮಾಡಿ, ಕೃಷ್ಣನ ಕಥೆಗಳನ್ನು ಮಕ್ಕಳಿಗೆ ಹೇಳಿದರು.
ಮುಖ್ಯ ಶಿಕ್ಷಕ ಮುನಿರಾಜು, ಭಗವಾನ್ ಶ್ರೀಕೃಷ್ಣ ಅವತಾರ ಪುರುಷ. ದುಷ್ಠರನ್ನು ಶಿಕ್ಷಿಸಲು, ಸಜ್ಜನರನ್ನು ರಕ್ಷಿಸಲು ಭೂಮಿಗೆ ಬಂದ ಭಗವಂತನಾಗಿದ್ದಾನೆಂದು ಹೇಳಿ, ಶ್ರೀಕೃಷ್ಣನ ಬಾಲ್ಯ, ಸಂದೇಶ, ಭಗವದ್ಗೀತೆ, ಜನ್ಮಾಷ್ಟಮಿ ಹಬ್ಬದ ವಿಶೇಷತೆಗಳನ್ನು ತಿಳಿಸಿದರು.
ಎಲ್.ಕೆ.ಜಿ ಇಂದ 7ನೇ ತರಗತಿವರೆಗಿನ ಮಕ್ಕಳು ರಾಧಾಕೃಷ್ಣರ ವೇಷಭೂಷಣ ತೊಟ್ಟು ಸಂಭ್ರಮಿಸಿದರು. ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಲಲಿತಾಭಟ್, ನಸ್ರತ್ ಝಬೀನ್, ಸೌಮ್ಯ, ನಝೀಮಾ, ಪ್ರಭಾವತಿ, ಹಾಜೀರಾ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್


