
ಹಲವಾರು ಕಲಾವಿದರು ವಿವಿಧ ಸಾಧಕರು ಇದ್ದು ಅವರನ್ನು ಗುರುತಿಸಿ ಮುಂಬರುವ ದಿನಗಳಲ್ಲಿ ಕಲಾವಿದರಿಗೆ ಗೌರವಿಸುವಂತೆ ಆಗಬೇಕು ಎಂದು ಅಥಣಿಯ ಸಾಹಿತ್ಯ ಮತ್ತು ಸಂಸ್ಕೃತಿಕ ಟ್ರಸ್ಟ್ ಹಾಗೂ ಸುಕನ್ಯಾ ವೃದ್ಧಾಶ್ರಮದ ಅಧ್ಯಕ್ಷರಾದ ಮಾಹದೇವ ಬಿರಾದಾರ ಹೇಳಿದರು ಅವರು ಐಗಳಿ ಗ್ರಾಮಕ್ಕೆ ಆಗಮಿಸಿ, ಪ್ರಶಸ್ತಿ ಪುರಸ್ಕೃತ ಶ್ರೀ ಪುಂಡಲೀಕ ಮಾದರ್ ಅವರಿಗೆ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಸಮಾಜಸೇವಕರಾದ ಅನ್ನಪ್ಪ ಭಜಂತ್ರಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಸೈದಪ್ಪ ಮಾದರ್ ಹಾಗೂ ಪುಂಡಲೀಕ ಅವರು ಧರ್ಮಪತ್ನಿ ಶಾಂತ ಮಾದರ್ ಉಪಸ್ಥಿತರಿದ್ದರು.

