ಕ್ಯಾಂಟ್ ಬರ್ರಿ( ಇಂಗ್ಲೆಂಡ್) ಕನ್ನಡಿಗ ಕರುಣ ನಯ್ಯರ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ಎ,ತಂಡ ಇಂಗ್ಲೆಂಡ್ ಪ್ರವಾಸದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ ವಿರುದ್ಧ ಬೃಹತ್ ಮೊತ್ತದತ್ತ ಮುನ್ನಡೆದಿದೆ.

-----------------------------ಶತಕದತ್ತ ಸರಫರಾಜ್ ಖಾನ್
ಮೊದಲ ದಿನದಾಟ ಮುಗಿದಾಗ ಭಾರತ ಎ, ತಂಡ 3 ವಿಕೆಟ್ ಗೆ 409 ರನ ಗಳಿಸಿದೆ. ಕರುಣ ನಯ್ಯರ 186, ಸರಫರಾಜ್ ಖಾನ್ 92 ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ಕರುಣ ನಯ್ಯರ 246 ಎಸೆತಗಳಲ್ಲಿ 24 ಬೌಂಡರಿ 1 ಸಿಕ್ಸರ್ ಸಿಡಿಸಿ ಭರ್ಜರಿ ಬ್ಯಾಟಿಂಗ್ ಫಾರ್ಮ್ ಮುಂದುವರೆಸಿದ್ದಾರೆ. ಸರಫರಾಜ್ ಖಾನ್ 119 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 92 ರನ್ ಗಳಿಸಿ ಶತಕದ ಅಂಚಿನಲ್ಲಿದ್ದಾರೆ.

