
ಸಾವಳಗಿ ಗ್ರಾಮದ ವಾರ್ಡ ನಂ 2 ರಲ್ಲಿ ಶಿಶು ಅಭಿವೃದ್ಧಿ ಯೋಜನೆ ಅಂಗನವಾಡಿ ಕೇಂದ್ರ. ಬೇಸಿಗೆಯ ರಜೆಯ ನಂತರ ಶಾಲಾ ಪುನರ್ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ ಇಂತಹ ಅವಕಾಶ ಯಾವತ್ತೂ ದೊರಕುವುದಿಲ್ಲ, ಸಿಕ್ಕ ಅವಕಾಶ ಚನ್ನಾಗಿ ಬಳಸಿಕೊಂಡು, ಶಿಕ್ಷಕರು ಮಕ್ಕಳಿಗೆ ಅಭ್ಯಾಸ ಕಲಿಸಿದರೆ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಮುಖ್ಯ ಗುರುಮಾತೆ ಸರೋಜಿನಿ ಮಾಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂಜೀವ್ ಮಾಳಿ ಸಿದ್ದಾರ್ಥ ತಳಕೇರಿ ಭರತೇಶ್ ಜಮಖಂಡಿ ಗಜಾನನ ಮಾಳಿ ಪಾಲಕರು ಹಾಗೂ ಮಕ್ಕಳು ಸೇರಿ ಇನ್ನೂ ಅನೇಕರು ಇದ್ದರು.
ವರದಿ :ಅಜಯ್ ಕಾಂಬಳೆ

