Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಬ್ಬಿನ ಜ್ಯೂಸ್ /ಎಳ ನೀರು : ಬೇಸಿಗೆಯಲ್ಲಿ ಆರೋಗ್ಯಕ್ಕೆ ಉತ್ತಮ ಯಾವುದು?

Advertisement
ಬೇಸಿಗೆಯ ಝಳ ಜೋರಾಗಿದೆ. ಈ ಋತುವಿನಲ್ಲಿ ಎಲ್ಲರೂ ತಣ್ಣನೆಯ ಪಾನೀಯಗಳನ್ನು ಕುಡಿಯಲು ಇಷ್ಟಪಡುತ್ತಾರೆ. ಅದರಲ್ಲಿ ನಿಂಬು ಪಾನೀಯ, ಎಳನೀರು, ಕಬ್ಬಿನ ಜ್ಯೂಸ್ ಸೇರಿದಂತೆ ತಾಜಾ ಹಣ್ಣುಗಳ ಪಾನೀಯವನ್ನು ಹೆಚ್ಚೆಚ್ಚು ಸೇವಿಸುತ್ತಾರೆ. ಆದರೆ ನೀವೇನಾದ್ರೂ ಎಳನೀರು ಹಾಗೂ ಕಬ್ಬಿನ ಜ್ಯೂಸ್ ಸೇವಿಸುತ್ತಿದ್ದೀರಾ ಅಂತಾದ್ರೆ ಇವೆರಡರಲ್ಲಿ ಯಾವುದು ಆರೋಗ್ಯ ಉತ್ತಮ? ಎನ್ನುವುದನ್ನು ತಿಳಿದುಕೊಂಡರೆ ಒಳ್ಳೆಯದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೇಸಿಗೆ (summer) ಯ ಕಾಲ ಶುರುವಾದರೆ ಜ್ಯೂಸ್ ಸೇರಿದಂತೆ ಎಳನೀರಿಗೆ ಬಾರಿ ಬೇಡಿಕೆಯಿರುತ್ತದೆ. ಕೆಲವರು ಮನೆಯಲ್ಲೇ ಮಾಡಿದ ತಾಜಾ ಹಣ್ಣಿನ ಜ್ಯೂಸ್ ಗೆ ಮೊದಲ ಆದ್ಯತೆ ನೀಡಿದರೆ ಇನ್ನು ಕೆಲವರು ಕಬ್ಬಿನ ಜ್ಯೂಸ್ (sugarcane juice) ಹಾಗೂ ಎಳನೀರ (coconut water) ನ್ನು ಕುಡಿಯುವುದನ್ನು ನೋಡಬಹುದು. ಈ ಋತುವಿನಲ್ಲಿ ಎಲ್ಲೆಂದರಲ್ಲಿ ಕಬ್ಬಿನ ಜ್ಯೂಸ್ ಅಂಗಡಿ ಹಾಗೂ ರಸ್ತೆ ಬದಿಯಲ್ಲಿ ಎಳನೀರನ್ನು ಮಾರಾಟ ಮಾಡಲಾಗುತ್ತದೆ. ಈ ಬೇಸಿಗೆಯಲ್ಲಿ ಕಬ್ಬಿನ ಜ್ಯೂಸ್ ಹಾಗೂ ಎಳನೀರನ್ನು ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ. ಆದರೆ ತಜ್ಞರು ಈ ಎರಡರಲ್ಲಿ ಯಾವುದು ಉತ್ತಮ ಎನ್ನುತ್ತಾರೆ ಎನ್ನುವ ಬಗೆಗಿನ ಮಾಹಿತಿ ಇಲ್ಲಿದೆ.

ಎಳನೀರು ಹಾಗೂ ಕಬ್ಬಿನ ರಸದ ಆರೋಗ್ಯ ಪ್ರಯೋಜನಗಳು : 
ಬೇಸಿಗೆಯಲ್ಲಿ ಹೆಚ್ಚಾ ಬೇಡಿಕೆಯಿರುವ ಎಳನೀರಿನಲ್ಲಿ ಮೆಗ್ನೇಷಿಯಮ್, ವಿಟಮಿನ್ ಸಿ ನಿಂದ ಸಮೃದ್ಧವಾಗಿದ್ದು, ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಇದರಲ್ಲಿದೆ. ಬೇಸಿಗೆಯಲ್ಲಿ ಹೆಚ್ಚು ತೆಂಗಿನ ನೀರು ಅಥವಾ ಎಳನೀರು ಸೇವನೆ ಮಾಡುವುದರಿಂದ ಇದು ದೇಹವನ್ನು ಹೈಡ್ರೇಟ್ ಆಗಿರಿಸಲು ಸಹಾಯ ಮಾಡುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಯೌವನದಿಂದ ಕಾಣುವಂತೆ ಮಾಡುತ್ತದೆ. ಜೀರ್ಣಕ್ರಿಯೆ ಸುಧಾರಿಸಿ, ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಾಯಕವಾಗಿದೆ. ಅದಲ್ಲದೆ ಹೃದಯದ ಆರೋಗ್ಯ ಹಾಗೂ ತೂಕ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಬೇಸಿಗೆಯಲ್ಲಿ ಕಬ್ಬಿನ ಜ್ಯೂಸ್ ಗೆ ಎಲ್ಲಿಲ್ಲದ ಬೇಡಿಕೆ, ಇದು ಮೆಗ್ನೀಸಿಯಮ್, ಮ್ಯಾಂಗನೀಸ್, ಸತು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಸೇರಿದಂತೆ ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರ ನಿಯಮಿತ ಸೇವನೆಯೂ ದೇಹಕ್ಕೆ ಬೇಕಾಗುವ ತ್ವರಿತ ಶಕ್ತಿಯನ್ನು ಒದಗಿಸುತ್ತದೆ. ನಿಯಮಿತ ಸೇವನೆಯೂ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಅದರೊಂದಿಗೆ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರ ಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದಲ್ಲದೇ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ಯಕೃತ್ತನ್ನು ಸೋಂಕು ಬರದಂತೆ ತಡೆಯುತ್ತದೆ.

ಕಬ್ಬಿನ ಜ್ಯೂಸ್ ಹಾಗೂ ಎಳ ನೀರಿನಲ್ಲಿ ಯಾವುದು ಉತ್ತಮ?
ಬೇಸಿಗೆಯಲ್ಲಿ ಎಲ್ಲರೂ ಕಬ್ಬಿನ ಜ್ಯೂಸ್ ಹಾಗೂ ಎಳ ನೀರಿನಲ್ಲಿ ಸೇವಿಸುತ್ತಾರೆ. ಆದರೆ ಕಬ್ಬಿನ ಜ್ಯೂಸ್ ಗಿಂತ ಎಳನೀರು ಉತ್ತಮ ಆರೋಗ್ಯಕ್ಕೆ ಎನ್ನಬಹುದು. ಹೌದು, ಇದು ದೇಹವನ್ನು ಹೈಡ್ರೇಟ್ ಆಗಿರಿಸಲು ಸಹಾಯಕವಾಗಿದೆ. ಆದರೆ ಈ ಕಬ್ಬಿನ ಜ್ಯೂಸ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಆಗಿದ್ದರೂ ಇದರಲ್ಲಿ ಹೆಚ್ಚಿನ ಮಟ್ಟದಲ್ಲಿ ಕ್ಯಾಲೋರಿ ಹಾಗೂ ಸಕ್ಕರೆ ಅಂಶವಿದೆ. ಇದನ್ನು ಹೆಚ್ಚು ಸೇವಿಸುವುದರಿಂದ ಬೊಜ್ಜಿನ ಸಮಸ್ಯೆಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಅದಲ್ಲದೇ ಮಧುಮೇಹ ಸಮಸ್ಯೆಯಿರುವವರು ಈ ಕಬ್ಬಿನ ಜ್ಯೂಸ್ ಸೇವನೆಯಿಂದ ದೂರವಿರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎನ್ನಬಹುದಾಗಿದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ