Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ

Advertisement
ಕಾಗವಾಡ : ಗುರುಗಳಲ್ಲಿ ಎರಡು ಪ್ರಕಾರದ ಗುರುಗಳಿದ್ದಾರೆ ಒಬ್ಬರು ಲೌಕಿಕ ಗುರುಗಳು ಇನ್ನೊಬ್ಬರು ಆದ್ಯಾತ್ಮಿಕ ಗುರುಗಳು ಆಧ್ಯಾತ್ಮಿಕ ಗುರುಗಳು ಮುಕ್ತಿಮಾರ್ಗ ತೊರಿಸುತ್ತಾರೆ ಆದರೆ ನಾವೆಲ್ಲ ಶಿಕ್ಷಕರು ಮಕ್ಕಳಿಗೆ ಜೀವನದ ಮಾರ್ಗ ತೋರಿಸುವ ಮಹತ್ವದ ಕಾರ್ಯವನ್ನು ಮಾಡುತ್ತೆವೆಎಂದು ನಿವೃತ್ತಿ ಪಾಚಾರ್ಯ ಸಂಗಮೇಶ ಗುಜಗೊಂಡ ಹೇಳಿದರು.

ಅವರು ಶುಕ್ರವಾರ ದಿನಾಂಕ ೫ರಂದು ತಾಲೂಕಾ ಆಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾಗವಾಡ ಇವರ ಸಂಯುಕ್ತಾಶ್ರಯದಲ್ಲಿ ಉಗಾರ ಖುರ್ದ ಜೈನ್ ಸಮಾಜ ಮಂಡಳ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಭಾ ಭವನದಲ್ಲಿ ಕಾಗವಾಡ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ, ಒಬ್ಬ ಶಿಕ್ಷಕ ಪಾರದರ್ಶಕ,ಹಿತಯಸಿ,ಬಂಧು,ಪ್ರೇರಣೆ ಶಕ್ತಿಯಾಗಿರುತ್ತಾನೆ.ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿರುತ್ತಾನೆ ಎಂಬುವುದನ್ನು ಮರೆಯಬಾರದು. ಶಿಕ್ಷಕರು ರಾಷ್ಟ್ರದ ನಿರ್ಮಾಪಕರು ಕಾರಣ ಜ್ಞಾನಕ್ಕೆ ಇರುವ ಬೆಲೆ ಜಗತ್ತಿನಲ್ಲಿ ಯಾವುದಕ್ಕೂ ಇಲ್ಲ, ಜ್ಞಾನದಿಂದ ಎಲ್ಲವನ್ನು ಗೆಲ್ಲಬಹುದು ಎಂದರು.

ದಿವ್ಯಸಾನಿದ್ಯವನ್ನು ಯಡೂರ ಶ್ರೀ ಸಿದ್ಧಲಿಂಗ ಶಿವಾಚಾರ್ಯ ವೇದ ಸಂಗಮ ಸಂಸ್ಕೃತ ಪಾಠಶಾಲೆಯ ಪಾಚಾರ್ಯ ಶ್ರೀ ಶೈಲ್ ಶಾಸ್ತ್ರಿ ಗಳು ವಹಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಗವಾಡ ತಹಶೀಲ್ದಾರ್ ರವಿಂದ್ರ ಹಾದಿಮನಿ ಜ್ಯೋತಿ ಬೆಳಗಿಸಿ  ಮಾತನಾಡುತ್ತಾ ಶಿಕ್ಷಕ ವೃತಿಗೆ ಇರುವ ಗೌರವ ಅಭಿಮಾನ ಅವರು ಇರುವರೆಗು ಅವರ ಮರಣಾ ನಂತರ ಅಜರಾಮರವಾಗಿ ಉಳಿಯುವ ವೃತ್ತಿ ಶಿಕ್ಷಕ ಅದನ್ನು ಗೌರವಿಸಿ ಉಳಿಸಿ ಬೆಳಸಿಕೊಂಡು ಸ್ಮರಿಸಿ ಮುಂಬರುವ ವಿದ್ಯಾರ್ಥಿ ತಿಳಿಸಿ ಬೆಳೆಸುವ ಕಾರ್ಯ ಮಾಡಬೇಕೆಂದರು. ಜಗತ್ತಿನಲ್ಲಿ ಗುರುವಿಗೆ ಇರುವ ಸ್ಥಾನಮಾನ ಯಾವುದಕ್ಕೂ ಇಲ್ಲ, ವ್ಯಕ್ತಿ ಎಂತಹ ಉನ್ನತ ಹುದ್ದೆಯಲ್ಲಿದ್ದರೂ ಶಿಕ್ಷಕರಿಗೆ ಭಕ್ತಿಯಿಂದ ಗೌರವದಿಂದ ಕಾಣುತ್ತಾರೆ, ಶಿಕ್ಷಕರ ಹುದ್ದೆ ಅತ್ಯಂತ ಪವಿತ್ರವಾದದ್ದು. ಅದರಂತೆ ಗುರು- ಶಿಷ್ಯರ ಸಂಬಂಧ ಕೂಡ ಗಟ್ಟಿಯಾದದ್ದು, ಶಿಕ್ಷಣದ ಮಟ್ಟ ಸುಧಾರಣೆಯಾದಂತೆ ದೇಶ ಪ್ರಗತಿಯಾಗುತ್ತದೆ.  ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ ಸಂಜಯ ಕುರಣೆಯವರ ಬರೆದ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು
ವೇದಿಕೆ ಮೇಲೆ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ  ಪಿ ಬಿ ಮದಭಾವಿ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಸಿ ಡಿ ಪಿ ಓ ರವಿಂದ್ರ ಗುದಗೇನ್ನವರ, ಉಗಾರ ಖುರ್ದ ಪುರಸಭೆ ಅಧ್ಯಕ್ಷ ಫಾತಿಮಾ ನದಾಫ್, ಶಿಕ್ಷಕರ ಸಂಘದ ಅಧ್ಯಕ್ಷ,ಎಂ ಜಿ ಸಂಕಪಾಳ, ಸರಕಾರಿ ನೌಕರ ಸಂಂಘದ ಅಧ್ಯಕ್ಷ ಎಸ್ ಎಸ್ ಭಾವಿ,ಗೌಡಪ್ಪ ಸಡ್ಡಿ, ಕುಮಾರ ಗಾಣಿಗೇರ, ಎಂ ವಾಯ್ ಪೂಜಾರಿ,ಜಿತೇಂದ್ರ ಸಾಂಗಲಿ, ಬಿ.ಎನ್ ಸಾಂಗಾವೆ, ಎಸ್.ಎಸ್. ಕೋಳಿ ಡಿ ಆರ್ ಜಾದವ್, ಶ್ರೀಶೈಲ ಮಾಳಿ ಸೇರಿದಂತೆ ಇತರರು ಇದ್ದರು.,ಪಿ.ಬಿ ಮದಭಾವಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಹುಲ್ಲೊಳ್ಳಿ,ಭರತ ಟೊಣಗೆ ನಿರೂಪಿಸಿದರು.ಎಸ್.ಆರ್ ಮಾಳಿ ವಂದಿಸಿದರು.

ವರದಿ :  ಚಂದ್ರಕಾಂತ ಕಾಂಬಳೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ