ನಂತರ ಎಂ ಆರ್ ಡಬ್ಲ್ಯೂ ಬಸವರಾಜ ಸಾಸಾಲ್ಮರಿ ಮಾತನಾಡಿ - ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಅಡಿಪ್ ಯೋಜನೆ ಅಡಿಯಲ್ಲಿ ಅಲಿಂಕೋ ಸಂಸ್ಥೆ ಸಂಯೋಗದೊಂದಿಗೆ ದಿವ್ಯಾಂಗ ಜನರಿಗೆ ಉಚಿತ ವಿವಿಧ ಸಾಧನ ಸಲಕರಣೆಗಳು ವಿತರಣೆ ಮಾಡಿದ್ದು ದಿವ್ಯಾಂಗ ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಈ ಯೋಜನೆಯ ಲಾಭ ಪಡೆಯಬೇಕು ಎಂದು ಸುಮಾರು ೧೨ ಲಕ್ಷ ೪೩ ಸಾವಿರ ೯೭೦ ರೂ ವೆಚ್ಚದಲ್ಲಿ ೩೪೬ ಫಲಾನುಭವಿಗಳಿಗೆ ವಿವಿಧ ಸಾಧನ ಸಲಕರಣೆಗಳನ್ನು ಸರ್ಕಾರದಿಂದ ನಿಜವಾದ ಫಲಾನುಭವಿಗಳಿಗೆ ದೊರಕಬೇಕೆನ್ನುವ ಉದ್ದೇಶದಿಂದ ಅಲಿಂ ಕೋ ಸಂಸ್ಥೆ ತಾಲೂಕಿನಲ್ಲಿರುವ ದಿವ್ಯಾಂಗರಿಗೆ ಮೌಲ್ಯಮಾಪನ ಮಾಡಿ ಸಾಧನ ಸಲಕರಣೆಗಳನ್ನು ವಿತರಿಸಿದ್ದು ಅದರಿಂದ ಅವರ ಘನತೆಯಿಂದ ಸ್ವಾತಂತ್ರವಾಗಿ ಸಮಾಜದಲ್ಲಿ ಜೀವಿಸಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ, ಅಮರಗುಂಡಪ್ಪ ಎಡಿ ತಾಲೂಕ ಪಂಚಾಯಿತಿ, ಬಸವರಾಜ ಸಾಸಾಲ್ಮರಿ ಎಂ ಆರ್ ಡಬ್ಲ್ಯೂ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಹಿರೇಮಠ, ಅಭಿಷೇಕ್, ಕಿಶನ್, ಅಲಿಂಕೋ ಸಂಸ್ಥೆ ಯಾವ ಸ್ಥಾಪಕರು ಬೆಂಗಳೂರು, ಹನುಮಂತಪ್ಪ ಜಿಲ್ಲಾ ಆರ್ ಡಿ ಡಿ ಆರ್ ಸಿ ಸಂಸ್ಥೆ ರಾಯಚೂರು, ಟೀಕರಾಜ್ ಜಿಲ್ಲಾ ಸಂಯೋಜನೆ ಅಧಿಕಾರಿಗಳು, ನಾಗಪ್ಪ ಬಿ ಐ ಎಫ್ ಆರ್ ಟಿ, ಬಿಇಸಿ ಸಿಂಧನೂರು, ಇಂದು ಅನೇಕರಿದ್ದರು
ವರದಿ :ಬಸವರಾಜ ಬುಕ್ಕನಹಟ್ಟಿ

