Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗಡಿಭಾಗದ ಗ್ರಾಮ ಪಂಚಾಯತಿಗಳು ಕೇವಲ ಚುನಾವಣೆಗೆ ಮಾತ್ರ ಬಳಸಿಕೊಳ್ಳುತ್ತಿರಾ..?

Advertisement
ಸೇಡಂ: ಅನೇಕ ರೀತಿಯ ಕೆಲಸಗಳು ನಡೆಯುತ್ತಿವೆ ಎಂಬಂತೆ ಸುಳ್ಳು ಪ್ರಕರಣಗಳನ್ನು ತೋರಿಸಿ, ತಾಲೂಕ ಪಂಚಾಯತ್ ನಿಂದಾ ಅನುಧಾನ ಪಡೆದು ಅದೆಲ್ಲ ಅವರವರ ಮನೆಗೆ ಸೇರಿಸಿಕೊಳ್ಳುತ್ತಾರೆ.

ಗಡಿಭಾಗದಲ್ಲಿರುವ ಗ್ರಾಮ ಪಂಚಾಯತಿಗಳಿಗೆ ಒಂದು ಗ್ರಂಥಾಲಯ ಕೂಡ ಇಲ್ಲದೆ ಇರುವುದು ದುರದೃಷ್ಟ ಎಂದೇ ಹೇಳಬಹುದು ಅಲ್ಲವೇ.

ಈ ಹಿಂದೆ ಕಳೆದ ವರ್ಷ ಮೆದಕ್ ಗ್ರಾಮ ಪಂಚಾಯಿತಿಗೆ ಒಳಪಡುವ ಸಿಲಾರಕೋಟ್ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡಕ್ಕಾಗಿ ಅಂಬೇಡ್ಕರ್ ಯುವಕರ ಸಂಘ ವತಿಯಿಂದ ಅನೇಕ ಪ್ರಯತ್ನಗಳು ಮಾಡಿದರೂ ಇಲ್ಲಿನ ರಾಜಕೀಯ ನಾಯಕರದ್ದೆ ಗೆಲುವು ಆಯಿತು ಎಂಬಂತೆ ಆಯಿತು ಸಂಘದ ಪರಿಸ್ಥಿತಿ.

ರಾಜಕೀಯ ಪರವಾಗಿ ಅನೇಕ ರೀತಿಯ ಬೆದರಿಕೆಗಳು ನೀಡಿದ್ದಲ್ಲದೆ, ಕಾಲಿ ಇರುವ ಸ್ಥಳವನ್ನು ದೇವಸ್ಥಾನಕ್ಕೆ ಉಪಯೋಗಿಸಿದರು, ದೇವಸ್ಥಾನದ ಮುಂದೆ ಇರುವ ಸ್ಥಳವನ್ನು, ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡಿದರು ನಾವು ಅದನ್ನು ತಡೆಹಿಡಿದು ಇದೆ ಜಾಗದಲ್ಲಿ ನಮಗೆ ಗ್ರಂಥಾಲಯ ನಿರ್ಮಿಸಿಕೊಡಿ ಎಂದು ಬೇಡಿಕೆ ಇಟ್ಟಿದ್ದರು. ಆದರೆ ಅದು ಸಹ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾದರು ಇಲ್ಲಿನ ನಾಯಕರು.

ಇಷ್ಟೆಲ್ಲಾ ನಡೆಯುತ್ತಿದೆ ಎಂದು ಸ್ಥಳೀಯ ಶಾಸಕರ ಗಮನಕ್ಕೆ ತಂದಾಗ, ಮಾಡಿಕೊಡುವೆ ಎಂಬ ಭರವಸೆ ಬಿಟ್ಟರೆ ಇದುವರೆಗೂ ಯಾವುದೇ ಕೆಲಸ ಶುರು ಮಾಡಿಲ್ಲ.

ಅವರು ಸ್ಥಳ, ಕೊಡಲಿಲ್ಲ, ಕಟ್ಟಡ ನಿರ್ಮಾಣ ಮಾಡಿಕೊಟ್ಟಿಲ್ಲ, ಆದರೂ ಸಂಘದ ಸದಸ್ಯರು ಗ್ರಂಥಾಲಯಕ್ಕೆ ಸಂಬಂಧಪಟ್ಟ ಸಾಮಗ್ರಿಗಳು ಮತ್ತು ಪುಸ್ತಕಗಳು ಬರುವಂತೆ ಮಾಡಲಾಯಿತು.

ಆದರೆ ಅದು ಕೇವಲ ಒಂದು ಕೋಣೆಯಲ್ಲಿ ಹಾಕಿ ಬೀಗ ಹಾಕಿ ಯಾರಿಗೆ ಉಪಯೋಗವಾಗದಂತೆ ಮಾಡುತ್ತಿದ್ದಾರೆ ಇಲ್ಲಿನ ನಾಯಕರು, ಅಷ್ಟೇ ಅಲ್ಲದೆ ಆ ಕೋಣೆ ಚಾವಿ ಇಲ್ಲಿನ ಗ್ರಾಮ ಪಂಚಾಯತ್ ಅಧಿಕಾರಿಯಾದ ರಾಮಪ್ಪ ಎಂಬುವವರು ತಮ್ಮ ಹಿಂದೆ ತೆಗೆದುಕೊಂಡು ಹೋಗುತ್ತಾರೆ.

ಗ್ರಂಥಾಲಯ ಯಾವ ಕಾರಣಕ್ಕೆ ಗ್ರಾಮಕ್ಕೆ ಬರಬೇಕು ಎಂಬ ಇಚ್ಚೆಯಿತ್ತು,ನಾವು ನಮ್ಮ ಮಕ್ಕಳು, ಓದುವಿನಲ್ಲಿ ಬುದ್ಧಿವಂತರಾಗಲಿ ಎಂದು ಪ್ರಯತ್ನ ಮಾಡಿದ್ದೆವು ಆದರೆ ನಮ್ಮ ಪ್ರಯತ್ನಕ್ಕೆ ಇಲ್ಲಿನ ರಾಜಕೀಯ ನಾಯಕರ ಅಡ್ಡಿ ಜಾಸ್ತಿ ಆಗಿದೆ ಅದರಿಂದ ಸುಮಾರು ಒಂದು ವರ್ಷದಿಂದ ಪುಸ್ತಕಗಳು ಆ ಒಂದು ಕೋಣೆಯಲ್ಲಿಯೇ ಇದಾವೆ, ಅವುಗಳು ಹೊರಗೆ ಬರುವುದು ಯಾವಗೋ ಅಂತ ಗ್ರಾಮ ಪಂಚಾಯತ್ ಅಧಿಕಾರಿ, ಮತ್ತು ಇಲ್ಲಿನ ರಾಜಕೀಯ ನಾಯಕರೆ ತಿಳಿಸಬೇಕು.

ಇದು ಕೇವಲ ಮೇದಕ್ ಗ್ರಾಮ ಪಂಚಾಯತಿಯ ಒಂದು ಊರಿನ ಘಟನೆ ಅಷ್ಟೇ.

ಇಂತಹ ಘಟನೆಗಳು ಗಡಿಭಾಗದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಇದೆ.

ಸರಿಯಾದ ಸ್ವಚ್ಚತೆ ಇರುವುದಿಲ್ಲ, ಶೌಚಾಲಯಗಳು ಇರುವುದಿಲ್ಲ, ರಸ್ತೆಗಳು ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡುವುದಿಲ್ಲ.,

ಸ್ಥಳೀಯ ಶಾಸಕರು ೧೫ ವರ್ಷ ಆಳಿದರು ಈ ತಾಲೂಕವನ್ನು ಆದರೆ ಅವರು ಕೇವಲ ಸೇಡಂ ಸುತ್ತಮುತ್ತಲಿನ ಗ್ರಾಮಗಳಿಗೆ ಮಾತ್ರ ಒತ್ತುಕೊಟ್ಟರು ಹೊರತು ಗಡಿಭಾಗದ ಯಾವುದೇ ಗ್ರಾಮಕ್ಕೆ ಅಭಿವೃದ್ಧಿ ಮಾಡಿಸಿಕೊಟ್ಟಿಲ್ಲ ಎಂಬುದು ಅಕ್ಷರ ಸತ್ಯ.

ಬಿಜೆಪಿ ಶಾಸಕರು ಏನಾದರೂ ಮಾಡುತ್ತಾರೆಂಬ ಆಸೆ ಇತ್ತು ಆದರೆ ಅವರು ಕೂಡ ನಮ್ಮ ಆಸೆಗಳನ್ನು ವಿಪಲಮಾಡಿದರು.

ಯಾಕೆ ಈ ಶಾಸಕರಿಗೆ ಗಡಿಭಾಗದ ಗ್ರಾಮಗಳೆಂದರೆ ಇಷ್ಟೊಂದು ದ್ವೇಷ.

ಇಲ್ಲಿನ ಜನರನ್ನು ಕೇವಲ ಚುನಾವಣೆಗೆ ಮಾತ್ರ ಬಳಸಿಕೊಳ್ಳುತ್ತಾರೆಯೇ.?

ಅನೇಕ ಪ್ರಶ್ನೆಗಳಿಗೆ ಸ್ಥಳೀಯ ಶಾಸಕರು ಉತ್ತರ ಕೊಡಬೇಕಿದೆ.

ಸೇಡಂ ಅಕ್ಕಪಕ್ಕದಲ್ಲಿ ಇರುವ ಹಳ್ಳಿಗಳಲ್ಲಿ ಯಾವುದೇ ಸಣ್ಣ ಸಮಸ್ಯೆಗೆ ಅತಿ ಶೀಘ್ರವೇ ಸ್ಪಂದಿಸುವ ನೀವು ನಮ್ಮ ಗ್ರಾಮಗಳ ಅಭಿವೃದ್ಧಿಯ ಪ್ರಶ್ನೆ ಬಂದಾಗ ಯಾಕೆ ಸ್ಪಂದನೆ ನೀಡುವುದಿಲ್ಲ.

ಇದು ಹೀಗೆ ನಡೆದರೆ ಇಲ್ಲಿನ ಜನ ನಿಮಗೆ ಸರಿಯಾದ ಉತ್ತರ ಕೊಡುವಲ್ಲಿ ವಿಪಲವಾಗುವುದಿಲ್ಲ ಎಂಬುದನ್ನು ಮರೆಯಬೇಡಿ ಎಂದು ಮಾನವ ಹಕ್ಕುಗಳ ಮಂಡಳಿ ಸೇಡಂ ಸದಸ್ಯರು ಹಾಗೂ ಅಂಬೇಡ್ಕರ ಯುವಕರ ಸಂಘ ಉಪಾಧ್ಯಕ್ಷರು ಸಿಲರಕೋಟ್ ವೆಂಕಟಪ್ಪ ಕೆ ಸುಗ್ಗಾಲ್ ಅವರು ತಮ್ಮ ಮನದಾಳದ ಮಾತುಗಳು ವ್ಯಕ್ತಪಡಿಸಿದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ