ಗುರುವಾರದಿಂದ ಆರಂಭವಾಗುವ ಭಾರತ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-೨೦ ಸರಣಿ ಏಕಪಕ್ಷೀಯವಾಗಿರುವುದಿಲ್ಲ ಎಂದು ಹೇಳುವ ಮೂಲಕ ಜಿಂಬಾಬ್ವೆ ತಂಡದ ನಾಯಕ ಶಿಕಂದರ ರಾಜಾ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಜುಲೈ ೨೩ ರಿಂದ ಆರಂಭವಾಗುವ ಮೂರು ಪಂದ್ಯಗಳ ಟ್ವೆಂಟಿ-೨೦ ಸರಣಿಯಲ್ಲಿ ಎರಡೂ ತಂಡಗಳಿಗೂ ಶೇ ೫೦/೫೦ ಗೆಲ್ಲುವ ಅವಕಾಶ ಇದೆ ಎಂದು ಜಿಂಬಾಬ್ವೆ ನಾಯಕ ಹೇಳಿಕೆ ನೀಡಿದ್ದಾರೆ.
ಭಾರತ ಬಲಿಷ್ಠ ತಂಡ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಜಿಂಬಾಬ್ವೆ ತಂಡವು ಇತ್ತೀಚಿನ ದಿನಗಳಲ್ಲಿ ಉತ್ತಮ ಕ್ರಿಕೆಟ್ ಆಡಿದೆ. ಹೀಗಾಗಿ ಎರಡು ತಂಡಗಳಿಗೂ ಗೆಲ್ಲುವ ಅವಕಾಶ ಇದೆ ಎಂದು ಹೇಳುವ ಮೂಲಕ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಏತನ್ಮಧ್ಯೆ ಭಾರತ ತಂಡವು ಐರ್ಯಲೆಂಡ್ ಹಾಗೂ ಇಂಗ್ಲೆAಡ್ ವಿರುದ್ಧದ ಟ್ವೆಂಟಿ-೨೦ ಸರಣಿ ಸೋತಿರುವ ಹಿನ್ನೆಲೆಯಲ್ಲಿ ಶ್ರೇಯಸ್ ಅಯ್ಯರ ಬಳಗ ಉತ್ತಮ ಕಮ್‌ಬ್ಯಾಕ್ ಮಾಡಲು ಕಾಯುತ್ತಿದೆ ಎನ್ನುವುದು ಕೂಡ ಅಷ್ಟೇ ಸತ್ಯ.


