Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೈದಾನದಲ್ಲೇ ಕುಸಿದು ಬಿದ್ದು ಕ್ರಿಕೆಟಿಗನ ಸಾವು

Advertisement
ಅಡಿಲೇಡ್‌: ಕ್ರಿಕೆಟ್ ಮೈದಾನದಲ್ಲೇ ಪಾಕಿಸ್ತಾನ ಮೂಲದ ಆಟಗಾರನೋರ್ವ ಕುಸಿದು ಸಾವನ್ನಪ್ಪಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಪಂದ್ಯದ ವೇಳೆ ಪಾಕಿಸ್ತಾನ ಮೂಲದ ಕ್ರಿಕೆಟಿಗ 40 ವರ್ಷದ ಜುನೈದ್ ಜಾಫರ್ ಖಾನ್  ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ  ಕಾನ್ಕಾರ್ಡಿಯಾ ಕಾಲೇಜು ಓವಲ್‌ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆಟಗಾರ ಕುಸಿಯುತ್ತಲೇ ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಯಿತು ಮತ್ತು ವೈದ್ಯಕೀಯ ಸಿಬ್ಬಂದಿ ಸಿಪಿಆರ್ ಮಾಡಿದರು, ಆದರೆ ಜುನೈದ್ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.

ಹೀಟ್ ಸ್ಟ್ರೋಕ್ ಕಾರಣ? ಅಡಿಲೇಡ್’ ನ ಕಾಂಕಾರ್ಡಿಯಾ ಕಾಲೇಜಿನಲ್ಲಿ ಪ್ರತಿಸ್ಪರ್ಧಿ ಪ್ರಿನ್ಸ್ ಆಲ್ಫ್ರೆಡ್ ಓಲ್ಡ್ ಕೊಲಿಜಿಯನ್ಸ್ ವಿರುದ್ಧ 40 ಓವರ್ಗಳಲ್ಲಿ ಫೀಲ್ಡಿಂಗ್ ಮಾಡಿದ್ದ ಓಲ್ಡ್ ಕಾಂಕಾರ್ಡಿಯನ್ಸ್ ಕ್ರಿಕೆಟ್ ಕ್ಲಬ್ ಆಟಗಾರ ಜುನೈದ್ ಅಜೇಯ 16 ರನ್ ಗಳಿಸಿದ್ದರು. ಜುನೈದ್ ಜಾಫರ್ ಖಾನ್ ಮೊದಲ 40 ಓವರ್‌ಗಳು ಫೀಲ್ಡಿಂಗ್ ಮಾಡಿದ್ದರು ಮತ್ತು 7 ಓವರ್‌ ಬ್ಯಾಟಿಂಗ್ ಮಾಡಿದ್ದರು.

ಪಂದ್ಯದ ವೇಳೆ ಮೈದಾನದಲ್ಲಿ ತಾಪಮಾನ 41.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಇದೇ ಸಂದರ್ಭದಲ್ಲಿ ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಕ್ಲಬ್ ತಮ್ಮ ಆಟಗಾರನ ನಷ್ಟಕ್ಕೆ ದುಃಖ ವ್ಯಕ್ತಪಡಿಸಿ, ಅರೆವೈದ್ಯರ ಪ್ರಯತ್ನಗಳನ್ನು ಶ್ಲಾಘಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ರಂಜಾನ್ ಉಪವಾಸ ಮಾಡುತ್ತಿದ್ದ ಜುನೈದ್: ಅಂದಹಾಗೆ ಕ್ರಿಕೆಟಿಗ ಜುನೈದ್ ಅವರ ಸ್ನೇಹಿತರೊಬ್ಬರು ರಂಜಾನ್ ಉಪವಾಸದ ಕುರಿತು ಮಾಹಿತಿ ನೀಡಿದ್ದು, ಜುನೈದ್ ಅವರು ರಂಜಾನ್ ಉಪವಾಸ ಆಚರಿಸುತ್ತಿದ್ದರು. ಪಂದ್ಯದ ಸಂದರ್ಭದಲ್ಲಿ ಅವರು ನೀರು ಮಾತ್ರ ಕುಡಿಯುತ್ತಿದ್ದರು ಎಂದು ಹೇಳಿದ್ದಾರೆ.

ಇಸ್ಲಾಮಿಕ್ ಸೊಸೈಟಿಯ ಅಧ್ಯಕ್ಷರು ಜುನೈದ್ ಜಾಫರ್ ಖಾನ್ ಅವರ ಸಾವಿಗೆ ಯಾವುದೇ ಅಧಿಕೃತ ಕಾರಣವನ್ನು ನಿರ್ಧರಿಸಲಾಗಿಲ್ಲ ಮತ್ತು ವೈದ್ಯಕೀಯ ಘಟನೆಗೆ ಉಪವಾಸ ಕಾರಣ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ ಎಂದು ಉಲ್ಲೇಖಿಸಿದ್ದಾರೆ.

 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ