ರಾಜ್ಯಾದ್ಯಂತ ಬಿಸಿಲಬೇಗೆ ಹೆಚ್ಚಾಗುತ್ತಿದೆ. ಕಲಬುರಗಿಯಲ್ಲಿ ಶನಿವಾರ ಗರಿಷ್ಠ ಉಷ್ಣಾಂಶ 39 ಡಿ.ಸೆ. ದಾಖಲಾಗಿದೆ. ಇದು ವಾಡಿಕೆ ಪ್ರಮಾಣಕ್ಕಿಂತ 1.9 ಡಿ.ಸೆ.ನಷ್ಟು ಅಧಿಕ. ಸಾಮಾನ್ಯವಾಗಿ ಮಾರ್ಚ್ ನಲ್ಲಿ ಕಲಬುರಗಿ ಜಿಲ್ಲೆಯಲ್ಲಿ 37.1 ಡಿಗ್ರಿ ಸೆಲ್ಸಿಯಸ್ ಇರುತ್ತದೆ.
ವಿಜಯಪುರದಲ್ಲಿ ಗರಿಷ್ಠ ಉಷ್ಣಾಂಶ 37 ಡಿ.ಸೆ. ದಾಖಲಾಗಿದೆ. ಗದಗ 36.7, ಬಾಗಲಕೋಟೆ, ಧಾರವಾಡ 36.6, ಬೆಳಗಾವಿ, ಜಿಲ್ಲೆಗಳಲ್ಲಿ 36.3, 5, ರಾಯಚೂರು 36 2.2. ದಾಖಲಾದರೆ, ಚಿತ್ರದುರ್ಗದಲ್ಲಿ 36.2 ಡಿ.ಸೆ. ದಾಖಲಾಗಿದೆ. ಈ ಮೂಲಕ ಸಾಮಾನ್ಯ ಬಿಸಿಲಿಗಿಂತ ಹೆಚ್ಚಾಗಿರುವುದು ಕಂಡು ಬಂದಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34.4 ಡಿ.ಸೆ. ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 1.7 ಡಿ.ಸೆ. ಹೆಚ್ಚಾಗಿದೆ.

