Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚೊಚ್ಚಲ ಹೆರಿಗೆಯಾಗಿದೆಯಾ ? ಬಾನಂತನವನ್ನು ಹೀಗೆ ನಿಭಾಯಿಸಿ...

Advertisement
ಹೆರಿಗೆಯ ನಂತರ ಹಾರ್ಮೋನುಗಳ ಅಸಮತೋಲನ ವಾಗುತ್ತವೆ. ನವಜಾತ ಶಿಶುವಿನ ಆರೈಕೆಯ ಜವಾಬ್ಧಾರಿಯು ಹೆಚ್ಚಾಗುತ್ತದೆ. ದೇಹದ ಬದಲಾವಣೆ ಅರಿವೂ ಇರುವುದಿಲ್ಲ. ಇಂತಹ ಕಾರಣಗಳಿಂದ, ಈ ಅವಧಿಯು ಅವರಿಗೆ ತುಂಬಾ ಕಷ್ಟಕರವಾಗಿದೆ. ಆದ್ದರಿಂದ ನೀವು ಮಾತೃತ್ವವನ್ನು ಆನಂದಿಸಲು ಕೆಲವು ಸಲಹೆಗಳು ಕೆಳಗಿನಂತಿವೆ.

ತಪ್ಪುಗಳು ವೈಫಲ್ಯವಲ್ಲ
ಹೆರಿಗೆಯ ನಂತರ ಮಗುವನ್ನು ಆರೈಕೆ ಮಾಡುವುದು, ಮಗುವನ್ನು ಶುಚಿಯಾಗಿಡುವುದು ಒಂದು ಪ್ರಮುಖ ಕೆಲಸವಾಗಿರುತ್ತದೆ. ಇದರಿಂದ ಒತ್ತಡವನ್ನು ಹೆಚ್ಚಿಸಿಕೊಳ್ಳುತ್ತಾಳೆ. ಕೆಲ ತಪ್ಪುಗಳಾಗುವುದು ಸಹಜ. ಆದರೆ ನಿಮ್ಮ ದಿನಚರಿಯನ್ನು ಮೊದಲಿನಂತೆ ಅನುಸರಿಸಲು ಪ್ರಯತ್ನಿಸಿ. ಮಗು ಅಳುತ್ತಿದ್ದರೆ ಶಾಂತಗೊಳಿಸಲು ಸಾಧ್ಯವಾಗದಿದ್ದರೆ, ಅದು ನಿಮ್ಮ ವೈಫಲ್ಯವೆಂದು ಭಾವಿಸಬೆಡಿ. ನಿಧಾನವಾಗಿ ಮಗುವನ್ನು ನಿಭಾಯಿಸುವ ಸಮಯಾಕಾಶ ಸ್ವತಃ ಕೊಟ್ಟುಕೊಳ್ಳಿ.

ಮಗು ನೋಡಿಕೊಳ್ಳುವವರಿದ್ದರೆ ಅವರ ಜೊತೆ ಜವಾಬ್ದಾರಿ ಹಂಚಿಕೊಳ್ಳಿ
ಮನೆಯಲ್ಲಿ ಬೆರೆ ಯಾರೋ ಮಗುವನ್ನು ನೋಡಿಕೊಳ್ಳುತಿದ್ದರೆ. ಕೆಲವು ಹೊಸ ತಾಯಿಯರು ತಮ್ಮ ಮಗು ತಮಗಿಂತ ಹೆಚ್ಚು ಅವರನ್ನು ಹಚ್ಚಿಕೊಂಡರೆ ಎಂಬ ಚಿಂತೆಗಿಡಾಗುತ್ತಾರೆ. ಆದರೆ, ಮಗುವಿಗೆ ಯಾವತ್ತೂ ತಾಯಿಯೇ ಮೊದಲಾಗಿರುತ್ತಾಳೆ. ಮಗುವನ್ನು ಆಡಿಸಲು ಮನೆ ಮಂದಿಗೆಲ್ಲ ಅವಕಾಶ ಕೊಡಿ.

ಬಾಣಂತನ
ಹಿರಿಯರಿಂದ ಚೆನ್ನಾಗಿ ಬಾಣಂತನ ಮಾಡಿಸಿಕೊಳ್ಳಿ. ವಿಶೇಷವಾಗಿ ಮಸಾಜ್, ಸ್ನಾನ ನಿಮ್ಮ ಒತ್ತಡ ಕಡಿಮೆ ಮಾಡುತ್ತವೆ. ಬಾಣಂತನ ಮುಗಿದ ನಂತರ ಯಾರೂ ನಿಮಗೆ ಮಸಾಜ್ ಮಾಡುವುದಾಗಲೀ, ಸ್ನಾನ ಮಾಡಿಸಲಾಗಲೀ ಬರುವುದಿಲ್ಲ. ಹಾಗಾಗಿ, ಯಾವಾಗ ಎಲ್ಲ ಕಾಳಜಿ ವಹಿಸುತ್ತಾರೋ, ಅದನ್ನು ಪೂರ್ಣ ಮನಸ್ಸಿನಿಂದ ಆನಂದಿಸಿ.

ಉದ್ವೇಗವು ನಿಮ್ಮನ್ನು ಆವರಿಸಲು ಬಿಡಬೇಡಿ
ತನ್ನ ಮಗುವಿನೊಂದಿಗೆ ಸಮಯ ಕಳೆಯುವಾಗ ಸಂತೋಷವಾಗಿರುತ್ತಾಳೆ. ಆದರೆ ಕೆಲವು ವಿಷಯಗಳ ಬಗ್ಗೆ ಯೋಚಿಸುವಾಗ ಅವಳು ಒತ್ತಡಕ್ಕೊಳಗಾಗುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ವೈದ್ಯರು ಅಥವಾ ಸ್ನೇಹಿತರೊಂದಿಗೆ ಮಾತನಾಡಿ, ಇದು ನಿಮಗೆ ಒತ್ತಡದಿಂದ ದೂರವಿರಲು ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಚೆನ್ನಾಗಿ ನಿದ್ದೆ ಮಾಡಲು ಪ್ರಯತ್ನಿಸಿ. ಮಗು ಮಲಗಿದಾಗ ಮಲಗಿಬಿಡಿ.

ಗರ್ಭಾವಸ್ಥೆಯಿಂದ ಹೆರಿಗೆಯವರೆಗೆ ದೇಹದಲ್ಲಿ ಬದಲಾವಣೆಗಳು ಸಹಜ.. ತೂಕ ತುಂಬಾ ಹೆಚ್ಚಾಗುತ್ತದೆ, ಇದರಿಂದಾಗಿ ಸೌಂದರ್ಯವು ಕಡಿಮೆಯಾಗುತ್ತದೆ ಮತ್ತು ಆರೋಗ್ಯವೂ ಹದಗೆಡುತ್ತದೆ. ಅದರ ಬಗ್ಗೆ ಸ್ವಲ್ಪವೂ ಯೋಚಿಸಬೇಡಿ. ಮಗು ಹಾಲು ಕುಡಿದಂತೆಲ್ಲ ಸಾಕಷ್ಟು ತೂಕ ಕಡಿಮೆಯಾಗುತ್ತಾ ಹೋಗುತ್ತದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ