Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಈ ವರ್ಷ ನಗಲೇ ಇಲ್ಲ ಜೀವಂತ ರತಿ-ಮನ್ಮಥರು : ಉಳಿದ 13 ಲಕ್ಷ ರೂಪಾಯಿ 

Advertisement
ರಾಣೇಬೆನ್ನೂರು: ಹೋಳಿ ಹಬ್ಬದ ಅಂಗವಾಗಿ ನಗರದಲ್ಲಿ ಪ್ರತಿ ವರ್ಷದಂತೆ ಆಯೋಜಿಸಲಾಗಿದ್ದ 'ಜೀವಂತ ರತಿ-ಮನ್ಮಥರನ್ನು ನಗಿಸುವ ಸ್ಪರ್ಧೆ' ಈ ಬಾರಿಯೂ ತೀವ್ರ ಕುತೂಹಲ ಕೆರಳಿಸಿತ್ತು.

ಆದರೆ, ರತಿ-ಮನ್ಮಥ ವೇಷಧಾರಿಗಳು ನಗದೆ ತಮ್ಮ 66 ವರ್ಷಗಳ ಸುದೀರ್ಘ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ.

ಇದರಿಂದಾಗಿ ನಗಿಸಿದವರಿಗೆ ನೀಡಲು ಘೋಷಿಸಲಾಗಿದ್ದ ₹13 ಲಕ್ಷ ನಗದು ಬಹುಮಾನ ಸಮಿತಿಯ ಬಳಿಯೇ ಉಳಿದುಕೊಂಡಿದೆ.

ಒಕುಳಿ ಹಬ್ಬದ ಮುನ್ನಾದಿನವಾದ ಮಂಗಳವಾರ ನಗರದ ದೊಡ್ಡಪೇಟೆಯ ರಾಮಲಿಂಗೇಶ್ವರ ದೇಗುಲದ ಬಳಿ ವಿವಿಧ ಸಮಿತಿಗಳಿಂದ ಜೀವಂತ ರತಿ-ಮನ್ಮಥರನ್ನು ಕೂರಿಸಲಾಗಿತ್ತು.

ಸಾರ್ವಜನಿಕರು ಇವರನ್ನು ನಗಿಸಲು ನಾನಾ ತರಹದ ಕಸರತ್ತುಗಳನ್ನು ನಡೆಸಿದರು. ಆದರೆ ವೇಷಧಾರಿಗಳು ಕಿಂಚಿತ್ತೂ ನಗದೆ ಗಂಭೀರವಾಗಿಯೇ ಉಳಿದರು. ಬದಲಿಗೆ ನಗಿಸಲು ಹೋದವರೇ ಹಾಸ್ಯಕ್ಕೀಡಾದ ಪ್ರಸಂಗಗಳು ಕಂಡುಬಂದವು.

ನನ್ನ ಮದುವೆಗೆ ಬಂಗಾರ ಖರೀದಿಸಬೇಕಿದೆ, ನೀವು ನಕ್ಕರೆ ನಮಗೆ ಆರ್ಥಿಕ ಸಹಾಯವಾಗುತ್ತದೆ, ದಯವಿಟ್ಟು ನಕ್ಕುಬಿಡಿ" ಎಂದು ಯುವತಿಯೊಬ್ಬಳು ಪರಿಪರಿಯಾಗಿ ಬೇಡಿಕೊಂಡರೂ ರತಿ-ಮನ್ಮಥರು ಮಾತ್ರ ಮೌನ ಮುರಿಯಲಿಲ್ಲ.ಹೀಗಾಗಿ ಈ ಬಾರಿಯ 'ಹೋಳಿ ಬಂಪರ್' ಮೊತ್ತವಾದ ₹13 ಲಕ್ಷ ಯಾರ ಪಾಲೂ ಆಗದೆ ಹಾಗೆಯೇ ಉಳಿದಿದೆ. ರಾಣೇಬೆನ್ನೂರಿನ ಈ ಅಪರೂಪದ ಸಂಪ್ರದಾಯ ನೋಡುಗರ ಗಮನ ಸೆಳೆಯುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದೆ.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ