LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನಸಲಾಪುರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಸಂಭ್ರಮ ಎನ್‌ಪಿಎಲ್ ಕ್ರಿಕೆಟ್ ಟೂರ್ನಿ ಸಮಾರೋಪ

Advertisement

ಮಾನ್ವಿ: ತಾಲೂಕಿನ ನಸಲಾಪುರ ಗ್ರಾಮದ ಇಬ್ರಾಹಿಂ ಕಾಲೋನಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಎನ್‌ಪಿಎಲ್ ಸೀಸನ್-4 ಕ್ರಿಕೆಟ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಎನ್‌ಎಸ್‌ಪಿ ಟೈಗರ್ಸ್ ತಂಡ ಪ್ರಥಮ ಸ್ಥಾನ ಪಡೆದರೆ ಸುಲ್ತಾನ್ ವಾರಿಯರ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಇತರೆ ತಂಡಗಳ ಆಟಗಾರರೂ ಉತ್ತಮ ಕ್ರೀಡಾ ಮನೋಭಾವದಿಂದ ಆಟವಾಡಿ ಪ್ರಶಂಸೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಮರೇಶ ನಾಯಕ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಶೌರ್ಯದಿಂದ ಹೋರಾಡಿದ ಮಹಾನ್ ದೇಶಭಕ್ತರಲ್ಲಿ ಒಬ್ಬರು. ಅವರ ಧೈರ್ಯ ದೇಶಪ್ರೇಮ ಮತ್ತು ತ್ಯಾಗದ ಜೀವನ ಯುವಕರಿಗೆ ಸದಾ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.
ಕ್ರೀಡೆ ಯುವಕರಲ್ಲಿ ಶಿಸ್ತು ಆರೋಗ್ಯ ಸ್ನೇಹ ಏಕತೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಗೆಲುವು ಸೋಲು ಜೀವನದ ಭಾಗವಾಗಿದ್ದು ಪ್ರತಿಯೊಬ್ಬ ಆಟಗಾರನು ಎರಡನ್ನೂ ಸಮಾನ ಮನೋಭಾವದಿಂದ ಸ್ವೀಕರಿಸಿ ಉತ್ತಮ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರುಕ್ಮದ್ದೀನ್ ಹೋಟೆಲ್ ಬಂದೇನವಾಜ್ ಎಸ್‌ಡಿಎಂಸಿ ಅಧ್ಯಕ್ಷ ಬಂದೇನವಾಜ್ ಎಂ. ಈರಣ್ಣ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಯ್ಯ ನಾಯಕ ರಂಜಾನ್ ಪಟೇಲ್ ರಮೇಶ್ ಪಿಗ್ಮಿ ಅಬ್ಬಾಸ್ ಖಾಸಿಂ ಸಾಬ್ ಸತ್ತಾರ ಸಾಬ್ ಪಟೀಲ್ ನಬಿಸಾಬ್ ಸಲೀಮ್ ಪೊಲೀಸ್  ತಾಯಣ್ಣ ನಾಯಕ ಗಂಗೂ ನಾಯಕ ತಿಮ್ಮ ಮೈನು ಹಾಜಿ ಅಪ್ಸರ ಅಮೀದ್ ಮೌನದ್ದೀನ್ ಡಿಜೆ ಸೇರಿದಂತೆ ಗ್ರಾಮದ ಮುಖಂಡರು ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಪ್ರಧಾನಿ ಆಗೋದು ರಾಹುಲ್, ಪ್ರಿಯಾಂಕಾಗೆ ಇಷ್ಟವಿರಲಿಲ್ಲ" : ಆತ್ಮಕಥನದಲ್ಲಿ ಬಹಿರಂಗಶಾಕ್ ಮೇಲೆ ಶಾಕ್ : ಪ್ರತಿ ಕ್ವಿಂಟಲ್ ಗೋಧಿ 600 ರಿಂದ 1000 ಏರಿಕೆ! ಸೇಹವಾಗ್ ಸೂಪರ್ ಶತಕ : ಭಾರತ ಕಿರಿಯರ ತಂಡಕ್ಕೆ ಸುಲಭ ಗೆಲುವು ಗುಲಾಬಿ ಹೂವಿನ ಗಿಡದ ಕೆಳಗೆ ಮಗುವಿನ ಅಂತ್ಯಕ್ರಿಯೆ: ಸೋನಿಯಾ ಆತ್ಮಕಥನದಲ್ಲಿ ಮನಕಲಕುವ ಸಂಗತಿ ಹೈಕೋರ್ಟ್ ಆದೇಶ ಪಾಲಿಸದೇ ನ್ಯಾಯಾಂಗ ನಿಂದನೆ: ಜಿಲ್ಲಾಧಿಕಾರಿಗೆ 6 ತಿಂಗಳು ಜೈಲು ಶಿಕ್ಷೆಪ್ರಯಾಣಿಕರಿಗೆ ಮತ್ತೊಂದು ಶಾಕ್: ಲಗೇಜ್ ದರ ದುಪ್ಪಟ್ಟು ಹೆಚ್ಚಳ, ಹೊಸ ದರಪಟ್ಟಿ ಇಲ್ಲಿದೆ ಗವಿಮಠದ ಜಾತ್ರೆಗೆ ಭರ್ಜರಿ ಸಿದ್ಧತೆ : ಕಟ್ಟಿಗೆ ಹೊತ್ತು ಶ್ರೀಗಳ ಕಾಯಕ ಸೇವೆ ಪಲಿತಾಂಶ ಕಾಣದ ಭಾರತ- ನ್ಯೂಜಿಲೆಂಡ್ ಪಂದ್ಯ ಬರ ಪರಿಹಾರ ಘೋಷಿಸಿದ್ದು 2500 : ರೈತರ ಖಾತೆಗೆ ಜಮೆ ಆಗಿದ್ದು 1500-2000 ರೂಪಾಯಿ!ಕೊಲ್ಲಾಪುರದ ಮಹಾಲಕ್ಷ್ಮಿಗೆ ಇಂದಿನಿಂದ 15 ದಿನ ಕಾರ್ತಿಕ ಮಾಸದ ವಿಶೇಷ ಪೂಜೆ