LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶಾಕ್ ಮೇಲೆ ಶಾಕ್ : ಪ್ರತಿ ಕ್ವಿಂಟಲ್ ಗೋಧಿ 600 ರಿಂದ 1000 ಏರಿಕೆ! 

Advertisement

ಕಲಬುರ್ಗಿ: ರಾಜ್ಯದಲ್ಲಿ ಈಗಾಗಲೇ ಬಸ್ ಪ್ರಯಾಣ ದರ, ಹಾಲು, ಮೊಸರು, ತುಪ್ಪ ಮತ್ತು ಬೆಣ್ಣೆ ಸೇರಿದಂತೆ ಹಲವು ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಇದೀಗ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ. 

ಜಿಲ್ಲೆಯ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಗೋಧಿ ದರದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದ್ದು, ಸಾರ್ವಜನಿಕರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಂತಾಗಿದೆ.

ಈ ಹಿಂದೆ ಕಲಬುರ್ಗಿ ಎಪಿಎಂಸಿಯಲ್ಲಿ ಪ್ರತಿ ಕ್ವಿಂಟಾಲ್ ಗೋಧಿಗೆ 3,500 ರೂ. ನಿಂದ 4,500 ರೂ. ವರೆಗೆ ಮಾರಾಟವಾಗುತ್ತಿತ್ತು. ಆದರೆ ಇದೀಗ ಪ್ರತಿ ಕ್ವಿಂಟಾಲ್‌ಗೆ ಏಕಾಏಕಿ 600 ರೂ.ನಿಂದ 1,000 ರೂ. ವರೆಗೆ ಬೆಲೆ ಹೆಚ್ಚಳವಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಗೋಧಿ 4,800 ರೂ. ನಿಂದ 5,200 ರೂ. ವರೆಗೆ ಮಾರಾಟವಾಗುತ್ತಿದ್ದು, ನಿತ್ಯದ ಆಹಾರ ಧಾನ್ಯದ ಬೆಲೆ ಏರಿಕೆಯನ್ನು ಕಂಡು ಗ್ರಾಹಕರು ಹಾಗೂ ಸಾರ್ವಜನಿಕರು ತೀವ್ರ ಚಿಂತೆಗೀಡಾಗಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಪ್ರಧಾನಿ ಆಗೋದು ರಾಹುಲ್, ಪ್ರಿಯಾಂಕಾಗೆ ಇಷ್ಟವಿರಲಿಲ್ಲ" : ಆತ್ಮಕಥನದಲ್ಲಿ ಬಹಿರಂಗಶಾಕ್ ಮೇಲೆ ಶಾಕ್ : ಪ್ರತಿ ಕ್ವಿಂಟಲ್ ಗೋಧಿ 600 ರಿಂದ 1000 ಏರಿಕೆ! ಸೇಹವಾಗ್ ಸೂಪರ್ ಶತಕ : ಭಾರತ ಕಿರಿಯರ ತಂಡಕ್ಕೆ ಸುಲಭ ಗೆಲುವು ಗುಲಾಬಿ ಹೂವಿನ ಗಿಡದ ಕೆಳಗೆ ಮಗುವಿನ ಅಂತ್ಯಕ್ರಿಯೆ: ಸೋನಿಯಾ ಆತ್ಮಕಥನದಲ್ಲಿ ಮನಕಲಕುವ ಸಂಗತಿ ಹೈಕೋರ್ಟ್ ಆದೇಶ ಪಾಲಿಸದೇ ನ್ಯಾಯಾಂಗ ನಿಂದನೆ: ಜಿಲ್ಲಾಧಿಕಾರಿಗೆ 6 ತಿಂಗಳು ಜೈಲು ಶಿಕ್ಷೆಪ್ರಯಾಣಿಕರಿಗೆ ಮತ್ತೊಂದು ಶಾಕ್: ಲಗೇಜ್ ದರ ದುಪ್ಪಟ್ಟು ಹೆಚ್ಚಳ, ಹೊಸ ದರಪಟ್ಟಿ ಇಲ್ಲಿದೆ ಗವಿಮಠದ ಜಾತ್ರೆಗೆ ಭರ್ಜರಿ ಸಿದ್ಧತೆ : ಕಟ್ಟಿಗೆ ಹೊತ್ತು ಶ್ರೀಗಳ ಕಾಯಕ ಸೇವೆ ಪಲಿತಾಂಶ ಕಾಣದ ಭಾರತ- ನ್ಯೂಜಿಲೆಂಡ್ ಪಂದ್ಯ ಬರ ಪರಿಹಾರ ಘೋಷಿಸಿದ್ದು 2500 : ರೈತರ ಖಾತೆಗೆ ಜಮೆ ಆಗಿದ್ದು 1500-2000 ರೂಪಾಯಿ!ಕೊಲ್ಲಾಪುರದ ಮಹಾಲಕ್ಷ್ಮಿಗೆ ಇಂದಿನಿಂದ 15 ದಿನ ಕಾರ್ತಿಕ ಮಾಸದ ವಿಶೇಷ ಪೂಜೆ