Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪೇಯ್ಡ್ ಡೇಟಿಂಗ್ ಗೆ ಆಹ್ವಾನ: ಅಳಲು ತೋಡಿಕೊಂಡ ನಮ್ರತಾಗೌಡ

Advertisement
ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಹೆಸರು ಮಾಡೋದು ಅಷ್ಟು ಸುಲಭದ ಮಾತಲ್ಲ. ಜನಪ್ರಿಯತೆ ಜೊತೆಗೆ ಟೀಕೆ, ಅಡೆತಡೆಗಳನ್ನೂ ಎದುರಿಸಬೇಕಾಗುತ್ತದೆ. ವೈಯಕ್ತಿಕ ಜೀವನ ಆನ್​​ಲೈನ್​​ನಲ್ಲಿ ಚರ್ಚೆಗೊಳಪಡುತ್ತವೆ. ಕೆಲವರ ಹೆಸರು ಅವರಿಗೆ ಸಂಬಂಧಪಡದ ವಿಚಾರದೊಳಗೆ ಸಿಲುಕಿ ಸಮಸ್ಯೆ ಎದುರಿಸುತ್ತಾರೆ. ಅದರಲ್ಲೂ ಬೆಳೆಯುತ್ತಿರುವ ಕಲಾವಿದರು ಇಂಥ ಅಡೆತಡೆಗಳಿಗೆ ಒಳಗಾಗೋದುಂಟು.



ಇದೀಗ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿರುವ, ನಾಗಿಣಿ ಧಾರಾವಾಹಿ ಮೂಲಕ ಹೆಚ್ಚು ಖ್ಯಾತಿ ಹಾಗೂ ಬಿಗ್​ಬಾಸ್​ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ನಮ್ರತಾ ಗೌಡ ಅವರು ಸೋಷಿಯಲ್​​ ಮೀಡಿಯಾ ಬಳಕೆದಾರನೋರ್ವನ ಮೆಸೇಜ್​ಗಳಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಾರೆ.

ಬಾಲ ನಟಿಯಾಗಿ ಬೆಳೆದ ಇವರು ಹಲವು ಒಳ್ಳೊಳ್ಳೆ ಅವಕಾಶ ಪಡೆದುಕೊಂಡರು. ಜೊತೆಗೆ, ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವನ ವಿರುದ್ಧ ಸಿಡಿದೆದ್ದಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆದಾರನೋರ್ವ ಇನ್​ಸ್ಟಾಗ್ರಾಮ್​​ ಖಾತೆಯಿಂದ ನಮ್ರತಾ ಅವರಿಗೆ ಕೆಲ ಅಶ್ಲೀಲ ಸಂದೇಶಗಳನ್ನು ಕಳುಸಿದ್ದಾನೆ. ತನಗೆ ಸಾಕಷ್ಟು ರಾಜಕಾರಣಿಗಳ ಜೊತೆಗೆ ನಂಟು ಇದ್ದು, ಪೇಯ್ಡ್​​ ಡೇಟಿಂಗ್​ಗೆ ಆಹ್ವಾನ ಕೊಟ್ಟಿದ್ದಾರೆ. ತೆಗೆದುಕೊಳ್ಳುವ ಶುಲ್ಕವನ್ನು ಹೇಳುವಂತೆಯೂ ಮೆಸೇಜ್‌ ಮಾಡಿದ್ದಾನೆ.

 ನಟಿ ಶೇರ್ ಮಾಡಿರೋ ಮೆಸೇಜ್​​ನ ಸ್ಕ್ರೀನ್​ಶಾಟ್​​ನಲ್ಲಿ, ನನಗೆ ರಾಜಕಾರಣಿಗಳು, ವಿಐಪಿಗಳೊಟ್ಟಿಗೆ ನಂಟಿದೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್​​ಗಳನ್ನು ಅರೇಂಜ್ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್ ಮಾಡುವ ಆಲೋಚನೆ ಇದ್ರೆ ನಿಮ್ಮ ಶುಲ್ಕ ಹೇಳಿ. ನಿಮ್ಮ ಮೊಬೈಲ್ ನಂಬರ್ ಅಥವಾ ಫೋಟೋಗಳನ್ನು ಕಳುಹಿಸುವ ಅಗತ್ಯ ಇಲ್ಲ. ನೀವು ಹೆಚ್ಚಿನ ಶುಲ್ಕ ಕೇಳಿದರೂ ಅದನ್ನು ಕೊಡಲು ಸಿದ್ಧ ಇದ್ದೇವೆ. 200% ಎಲ್ಲವೂ ಖಾಸಗಿಯಾಗಿ ಇರುತ್ತದೆ. ಯಾವುದು ಸಹ ಬಹಿರಂಗವಾಗುವುದಿಲ್ಲ. ನಿಮಗೆ ಆಸಕ್ತಿ ಇದ್ದರೆ ಮಾಹಿತಿಯನ್ನು ಹಂಚಿಕೊಳ್ಳಿ ಎಂದು ಇದೇ ಸಂದೇಶವನ್ನು ಎರಡು ಮೂರು ಬಾರಿ ನಮ್ರತಾಗೆ ಕಳುಹಿಸಿದ್ದಾನೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಮ್ರತಾ ಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್​​ನ ಸ್ಕ್ರೀನ್​ಶಾಟ್​​ ಹಂಚಿಕೊಂಡಿದ್ದಾರೆ. ಈ ಸ್ಕ್ರೀನ್​ಶಾಟ್​​ ಮೇಲೆ, ''ಗೌರವಗಳೊಂದಿಗೆ, ನೀವಿದನ್ನು ನಿಲ್ಲಿಸಬೇಕು'' ಎಂದು ಬರೆದುಕೊಂಡಿದ್ದಾರೆ. ಆದರೆ, ಯಾವುದೇ ಕಾನೂನು ಕ್ರಮ ಜರಗಿಸಲು ನಮ್ರತಾ ಗೌಡ ಇನ್ನೂ ಮುಂದಾಗಿಲ್ಲ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ